ಚಿಕ್ಕೋಡಿ ಮಿನಿ ವಿಧಾನಸೌಧ ಕಚೇರಿಯನ್ನು ಸೀಲ್‌ಡೌನ್ ಮಾಡಿರುವುದು. 
ಜಿಲ್ಲೆ

ಕರೊನಾ ದೃಢ, ಚಿಕ್ಕೋಡಿ ಎಸಿ ಕಚೇರಿ ಸೀಲ್‌ಡೌನ್

ಚಿಕ್ಕೋಡಿ: ಚಿಕ್ಕೋಡಿ ಎಸಿ ಕಚೇರಿ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ತಗುಲಿದ ಪರಿಣಾಮ ಎಸಿ, ತಹಸೀಲ್ದಾರ್ ಕಚೇರಿ ಸೇರಿ ಪಟ್ಟಣದ ಮಿನಿ ವಿಧಾನಸೌಧದಲ್ಲಿನ 10ಕ್ಕೂ ಹೆಚ್ಚು ಕಚೇರಿಗಳನ್ನು ಸೋಮವಾರ ಸೀಲ್‌ಡೌನ್ ಮಾಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಡಾ. ಸುಂದರ ಆರ್. ನೇತೃತ್ವದಲ್ಲಿ ಮಿನಿ ವಿಧಾನಸೌಧದಲ್ಲಿರುವ ಕಚೇರಿಗಳಿಗೆ ಔಷಧ ಸಿಂಪಡಣೆ ಮಾಡಲಾಯಿತು. ಕರೊನಾ ಸೋಂಕಿತನನ್ನು ಚಿಕಿತ್ಸೆಗೆ ಬಿಮ್ಸ್‌ಗೆ ಕಳುಹಿಸಿ ಕೊಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಎಸಿ ರವೀಂದ್ರ ಕರಲಿಂಗಣ್ಣವರ ತಿಳಿಸಿದ್ದಾರೆ.