ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಜನರಿಗೆ ಕರೊನಾ ಪ್ರತಿಬಂಧಕ ಹೋಮಿಯೋಪಥಿ ಉಚಿತ ಔಷಧವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕಿ ಡಾ. ಸೋನಾಲಿ ಸರ್ನೋಬತ್ ವಿತರಿಸಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇದ್ದರು. 
ಜಿಲ್ಲೆ

ಕರೊನಾ ತೊಲಗಿಸಲು ಸಹಕರಿಸಿ

ಹಿರೇಬಾಗೇವಾಡಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮವನ್ನು ಮಹಾಮಾರಿ ಕರೊನಾ ವೈರಸ್ ಮುಕ್ತವನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಸಾರ್ವಜನಿಕರಲ್ಲಿ ವಿನಂತಿಸಿದರು.

ಬುಧವಾರ ಹಿರೇಬಾಗೇವಾಡಿ ಗ್ರಾಮದಲ್ಲಿ 3000 ಕುಟುಂಬಗಳಿಗೆ ಕರೊನಾ ವೈರಸ್ ಪ್ರತಿಬಂಧಕ ಹೋಮಿಯೋಪಥಿ ಉಚಿತ ಔಷಧ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜಿಲ್ಲೆಯಲ್ಲಿ ಅತಿ ಹೆಚ್ಚು ಕರೊನಾ ವೈರಸ್ ಸೋಂಕು ಪತ್ತೆಯಾಗಿರುವ ಹಿರೇಬಾಗೇವಾಡಿ ಗ್ರಾಮವನ್ನು ಕರೊನಾ ಮುಕ್ತವಾಗಿ ಮಾಡಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ನಾವೆಲ್ಲರೂ ಗ್ರಾಮಸ್ಥರ ಜತೆಯಲ್ಲಿದ್ದೇವೆ ಎಂದು ಧೈರ್ಯ ತುಂಬಿದರು.

ನಿರ್ಲಕ್ಷ್ಯ ಬೇಡ: ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕಿ ಡಾ. ಸೋನಾಲಿ ಸರ್ನೋಬತ್ ಮಾತನಾಡಿ, ಕರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ವೈದ್ಯಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಜನರು ಸ್ವಯಂಪ್ರೇರಿತರಾಗಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ವೈರಸ್ ಬಗ್ಗೆ ನಿರ್ಲಕ್ಷೃ ಮಾಡಿದಷ್ಟು ಸಮಸ್ಯೆ ಹೆಚ್ಚಾಗಲಿದೆ. ಹಾಗಾಗಿ ಜನರು ಹೆಚ್ಚು ಜಾಗ್ರತರಾಗಿ ತಮ್ಮ ದೈನಂದಿನ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಬಿಜೆಪಿ ವೈದ್ಯಕೀಯ ವಿಭಾಗದ ಕಲಾವತಿ ಧರೆಣ್ಣವರ, ಗ್ರಾಪಂ ಅಧ್ಯಕ್ಷ ಫಡಿಗೌಡ ಪಾಟೀಲ, ಗಿರಿಜಾ ಮಠಪತಿ, ಮಂಜು ಧರೆಣ್ಣವರ, ಶಿವು ಸೋನಪ್ಪನವರ, ಗಟ್ಟೇಶ ಧರೆಣ್ಣವರ, ನವೀನ ತೋಟಗಿ, ಪತ್ರೆಪ್ಪ ತೋಟಗಿ, ಬಾಬು ಪಡಗಲ್, ಬಸವರಾಜ ಅರಳಿಕಟ್ಟಿ, ಶಂಕರಗೌಡ ಹಾದಿಮನಿ, ಪ್ರಕಾಶ ಹಾರುಗೊಪ್ಪ, ಅಗ್ರಾಣಿ ಬೆಟಗೇರಿ, ಮಾರುತಿ ಉಪ್ಪಾರ, ಶಂಕರ ರೊಟ್ಟಿ, ಬಸಲಿಂಗಯ್ಯ ಮಠಪತಿ, ಪ್ರವೀಣ ಇಳಿಗೇರ, ಮಲ್ಲಿಕಾರ್ಜುನ ಕಟಿಗೆಣ್ಣವರ ಇತರರು ಇದ್ದರು.