ತುಮಕೂರು: ಜಿಲ್ಲೆಯಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮೈಚಳಿಬಿಟ್ಟು ಬೀದಿಗಳಿದು ಜನರಿಗೆ ಅರಿವು ಮೂಡಿಸಲಾರಂಭಿಸಿದೆ.
ಕೆಳಹಂತದ ಅಧಿಕಾರಿಗಳು ಕರೊನಾಗೆ ಹೆದರಿ ಜನರಿಂದ ದೂರವಾಗಿದ್ದು ಅವರನ್ನು ಚುರುಕಾಗಿಸಲು ಜಿಪಂ ಸಿಇಒ ಶುಭಾಕಲ್ಯಾಣ್ ಶುಕ್ರವಾರ ತುಮಕೂರು ತಾಲೂಕು ಹೆಬ್ಬೂರು ಸಂತೆಯಲ್ಲಿ ಕರಪತ್ರ ಹಂಚಿದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶುಭಾಕಲ್ಯಾಣ್, ಕರೊನಾ ಸೋಂಕು ನಿಯಂತ್ರಿಸಲು ಪರಿಣಾಮಕಾರಿ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಚಳಿಗಾಲದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಯಿದ್ದು ಜನರು ಜಾಗ್ರತೆ ವಹಿಸಬೇಕು ಎಂದರು. ಸಾಕಷ್ಟು ಹಬ್ಬಗಳು ನಡೆಯುತ್ತಿದ್ದು ಸಾರ್ವಜನಿಕರು ಒಟ್ಟಿಗೆ ಸೇರುವ ಸಾಧ್ಯತೆಯಿದೆ. ಎಲ್ಲರೂ ಜಾಗೃತಿ ವಹಿಸಿಕೊಳ್ಳಬೇಕು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಹೆಚ್ಚು ಜನರು ಸೇರುವ ಕಡೆಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸಲು, ಬಿತ್ತಿ ಪತ್ರಗಳಲ್ಲಿ ಬ್ಯಾನರ್‌ಗಳಲ್ಲಿ, ಪೋಸ್ಟರ್‌ಗಳಲ್ಲಿ ಕೋವಿಡ್-19ರ ಜಾಗೃತಿ ವಾಹಿತಿ ಅಳವಡಿಸಿ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು ಎಂದರು. ಪ್ರಮುಖ ೋಷ ವಾಕ್ಯವಾದ ವಾಸ್ಕ್ ಧಾರಣೆ, ಕರ ಶುಚಿತ್ವ ಮತ್ತು ಪರಸ್ಪರ 6 ಅಡಿಗಳ ಅಂತರವನ್ನು ವಿವಿಧ ಸಂವಹನಗಳ ಮೂಲಕ ಆಂದೋಲನದ ವಾದರಿಯಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
ಹೆಬ್ಬೂರಿನಲ್ಲಿ ಸಂತೆಯ ಅಂಗಡಿಗಳು ಮತ್ತು ಸಂತೆಗೆ ಬರುವ ಜನರಲ್ಲಿ ಕೋವಿಡ್19ರ ನಿಯಂತ್ರಣ ಕುರಿತಂತೆ, ಕೋವಿಡ್19ರ ಪ್ರಮುಖ ೋಷವಾಕ್ಯ ವಾಸ್ಕ್ ಧಾರಣೆ, ಕರ ಶುಚಿತ್ವ ಮತ್ತು ಪರಸ್ಪರ 6 ಅಡಿ ಅಂತರ ಬಳಕೆಯ ಬಗ್ಗೆ ಬಿತ್ತಿ ಪತ್ರ ನೀಡಿ ಅರಿವು ಮೂಡಿಸಿದರು. ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದ್ದರು.
203 ಜನರಿಗೆ ಕರೊನಾ ದೃಢ : ಜಿಲ್ಲೆಯಲ್ಲಿ ಶುಕ್ರವಾರ 203 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಇದೇ ಸಂದರ್ಭದಲ್ಲಿ 220 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ವಾಪಸ್ಸಾದರು. ಸೋಂಕು 4 ಜನರನ್ನು ಬಲಿ ತೆಗೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 377ಕ್ಕೇರಿದೆ. ಈವರೆಗೆ ಆಸ್ಪತ್ರೆಯಿಂದ 15,180 ಜನರು ಬಿಡುಗಡೆಯಾಗಿದ್ದು, 114 ಜನರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಸಿದೆ.
ಚಿಕ್ಕನಾಯಕನಹಳ್ಳಿ 17, ಗುಬ್ಬಿ 15, ಕೊರಟಗೆರೆ 13, ಕುಣಿಗಲ್ 20, ಮಧುಗಿರಿ 4, ಪಾವಗಡ 8, ಶಿರಾ 10, ತಿಪಟೂರು 20, ತುರುವೇಕೆರೆ 20 ಹಾಗೂ ತುಮಕೂರು ತಾಲೂಕಿನಲ್ಲಿ 76 ಜನರಿಗೆ ಕರೊನಾ ಬಂದಿದೆ. 119 ಪುರುಷರು, 84 ಮಹಿಳಾ ಸೋಂಕಿತರ ಪೈಕಿ ಇಬ್ಬರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 46 ಹಿರಿಯರು ಸೋಂಕಿತರಾಗಿದ್ದಾರೆ. ಸೋಂಕಿತರ ಸಂಪರ್ಕಿತರನ್ನು ಗುರುತಿಸಿ ಆಸ್ಪತ್ರೆಗಳಿಗೆ ದಾಖಲಿಸ ಲಾಗಿದೆ. ಕೊರಟಗೆರೆ ತಾಲೂಕು ಕೋಡ್ಲಹಳ್ಳಿಯ 60 ವರ್ಷದ ವೃದ್ಧೆ, ತಿಮ್ಮಸಂದ್ರದ 65 ವರ್ಷದ ವೃದ್ಧೆ, ತುಮಕೂರು ಚಿಕ್ಕಪೇಟೆಯ 80 ವರ್ಷದ ವೃದ್ಧ ಹಾಗೂ ಮಧುಗಿರಿಯ 75 ವರ್ಷದ ವೃದ್ಧ ಶುಕ್ರವಾರ ಬಲಿಯಾಗಿದ್ದಾರೆ.