ಜಿಲ್ಲೆ

ಕೋಲಾರ ಜಿಲ್ಲೆಯಲ್ಲಿ 88 ಮಂದಿಗೆ ಕರೊನಾ ಸೋಂಕು

Kolar

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ 88 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 16 ಮಂದಿ ಗುಣಮುಖರಾಗುವುದರೊಂದಿಗೆ 863 ಸಕ್ರಿಯ ಪ್ರಕರಣಗಳಿವೆ.

ಕೋಲಾರದಲ್ಲಿ 33 , ಮಾಲೂರು 29, ಬಂಗಾರಪೇಟೆ 7, ಕೆಜಿಎಫ್ 12, ಮುಳಬಾಗಿಲು 5 ಮತ್ತು ಶ್ರೀನಿವಾಸಪುರದಲ್ಲಿ 2 ಪ್ರಕರಣ ದೃಢಪಟ್ಟಿವೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 498 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 308 ಮಂದಿ ಮೇಲೆ ನಿಗಾ ಇಡಲಾಗಿದೆ.

ಮಾಲೂರಿನಲ್ಲಿ ಒಬ್ಬ ಸೋಂಕಿತನ ಸಂಪರ್ಕದಿಂದ 11 ಮಂದಿ ಪುರುಷರಿಗೆ ಸೋಂಕು ಹರಡಿದ್ದರೆ ಮತ್ತೊಬ್ಬ ಸೋಂಕಿತನಿಂದ ನಾಲ್ವರಿಗೆ, ಮತ್ತೊಂದು ಪ್ರಕರಣದಲ್ಲಿ ಮೂವರಿಗೆ, ಇನ್ನೊಬ್ಬರಿಂದ ಇಬ್ಬರಿಗೆ ರೋಗ ಹರಡಿದೆ. ಎಲ್ಲರನ್ನೂ ರಾಜೇನಹಳ್ಳಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. 7 ಮಂದಿಗೆ ವಿಷಮ ಶೀತಜ್ವರದ ಕಾರಣದಿಂದ ಹಾಗೂ ಇಬ್ಬರಿಗೆ ಇತರ ಕಾರಣದಿಂದ ಸೋಂಕು ಅಂಟಿಕೊಂಡಿದೆ.

ಕೋಲಾರದಲ್ಲಿ ವಿಷಮ ಶೀತಜ್ವರದಿಂದ ಬಳಲುತ್ತಿರುವ 17 ಮಂದಿಗೆ ಕರೊನಾ ದೃಢಪಟ್ಟಿದೆ. 5 ಸೋಂಕಿತರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಒಬ್ಬರ ಸಂಪರ್ಕದಿಂದ 3 ಜನರಿಗೆ, ಇತರ ಮೂವರಿಗೂ ಸಂಪರ್ಕದಿಂದಲೇ ಸೋಂಕು ಅಂಟಿದೆ. ಐವರು ಇತರ ಕಾರಣದಿಂದ ಸೋಂಕಿತರಾಗಿದ್ದಾರೆ.

ಶ್ರೀನಿವಾಸಪುರದಲ್ಲಿ ವಿಷಮ ಶೀತಜ್ವರದಿಂದ, ಉಸಿರಾಟದ ಸಮಸ್ಯೆಯಿಂದ ತಲಾ ಒಬ್ಬರು ಸೋಂಕಿತರಾಗಿದ್ದರೆ, ಬಂಗಾರಪೇಟೆಯಲ್ಲಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಒಬ್ಬರು, ವಿಷಮ ಶೀತಜ್ವರದಿಂದ ಮೂವರು, ಸಂಪರ್ಕದಿಂದ ಇಬ್ಬರಿಗೆ ಕರೊನಾ ದೃಢಪಟ್ಟಿದೆ. ಮುಳಬಾಗಿಲಿನಲ್ಲಿ ಉಸಿರಾಟದ ಸಮಸ್ಯೆಯಿಂದ ಇಬ್ಬರು, ವಿಷಮ ಶೀತಜ್ವರದಿಂದ 3 ಜನರಿಗೆ ಸೊಂಕು ಕಾಣಿಸಿಕೊಂಡಿದೆ. ಕೆಜಿಎಫ್‌ನಲ್ಲಿ ಸಂಪರ್ಕದಿಂದ ಒಬ್ಬರಿಗೆ, ವಿಷಮ ಶೀತಜ್ವರದಿಂದ 7 ಜನ ಹಾಗೂ ಪ್ರಯಾಣದ ಹಿನ್ನೆಲೆಯಿಂದ ನಾಲ್ವರಿಗೆ ಸೋಂಕು ವಕ್ಕರಿಸಿದೆ.

ಸಂಖ್ಯೆಯಲ್ಲಿ ಮೇಲುಗೈ: ಮಾಲೂರು ತಾಲೂಕಿನ 3ಸೋಂಕಿತರು, ಕೆಜಿಎಫ್‌ನ 3, ಮುಳಬಾಗಿಲಿನ 7, ಶ್ರೀನಿವಾಸಪುರದ 2 ಹಾಗೂ ಬಂಗಾರಪೇಟೆಯ ಒಬ್ಬ ಸೋಂಕಿತ ಕರೊನಾಮುಕ್ತರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಒಟ್ಟು 1741 ಸೊಂಕಿತರಲ್ಲಿ 842 ಮಂದಿ ಗುಣಮುಖರಾಗಿದ್ದು, 863 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಮೂರು ದಿನಗಳಿಂದ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿತ್ತು. ಇದೀಗ ಸೋಂಕಿತರ ಸಂಖ್ಯೆ ಮೇಲುಗೈ ಸಾಧಿಸಿದೆ.