ಜಿಲ್ಲೆ

ಚಿಕ್ಕಮಗಳೂರು: 35 ಜನರಲ್ಲಿ ಕರೊನಾ ಸೋಂಕು ಪತ್ತೆ

madikerimailmanju

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶನಿವಾರ 35 ಜನರಲ್ಲಿ ಸೋಂಕು ದೃಢಪಟ್ಟಿದ್ದು 32 ಮಂದಿ ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ತಾಲೂಕುವಾರು ಚಿಕ್ಕಮಗಳೂರಿನ 15, ತರೀಕೆರೆಯ 9, ಕಡೂರಿನ 8, ಕೊಪ್ಪದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 493 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12359 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು ಅವರಲ್ಲಿ 11730 ಮಂದಿ ಸಂಪೂರ್ಣ ಗುಣ ಹೊಂದಿದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇದುವರೆಗೆ 136 ಮಂದಿ ಮೃತಪಟ್ಟಿದ್ದಾರೆ.

ಶನಿವಾರ  ಪತ್ತೆಯಾದವರಲ್ಲಿ ಹೋಂ ಐಸೊಲೇಶನ್‍ನಲ್ಲಿ 32, ಡಿಸಿಎಚ್‍ಸಿನಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.