ಜಿಲ್ಲೆ

ಕರೊನಾಕ್ಕೆ ಒಂದು ಬಲಿ, 16 ಸೋಂಕಿತರು

madikerimailmanju

ಚಿಕ್ಕಮಗಳೂರು: ಕಾಫಿನಾಡಲ್ಲಿ ಬುಧವಾರ ಕರೊನಾ ಸೋಂಕಿಗೆ ಒಳಪಟ್ಟಿದ್ದ ಓರ್ವ ಮಹಿಳೆ ಮೃತಪಟ್ಟಿದ್ದು 16 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಬುಧವಾರ ಪತ್ತೆಯಾದವರಲ್ಲಿ 15 ಮಂದಿ ಹೋಂ ಐಸೊಲೇಶನ್ ಹಾಗೂ ಒಬ್ಬರು ಡಿಸಿಎಚ್ ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಗುಣಹೊಂದಿ ಬಿಡುಗಡೆಯಾಗಿದ್ದಾರೆ. ಚಿಕ್ಕಮಗಳೂರು ನಗರದ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 14249 ಜನರಲ್ಲಿ ಕರೊನಾ ಪತ್ತೆಯಾಗಿದ್ದು 13974 ಸಂಪೂರ್ಣ ಗುಣ ಹೊಂದಿ ಬಿಡುಗಡೆ ಯಾಗಿದ್ದಾರೆ. 129 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.