ಜಿಲ್ಲೆ

ನಾನೂ ಆಸ್ತಿಕನೆ ಅಂದ ಸಚಿವ ರಾಜಣ್ಣ

ಮಧುಗಿರಿ: ನಾನು ಆಸ್ತಿಕನೆ, ನಾಸ್ತಿಕನಲ್ಲ. ನಮಗೆ ರಾಮನ ಮೇಲೆ ಭಕ್ತಿ ಇಲ್ಲ, ನಾವು ರಾಮನ ವಿರೋಧಿಗಳು ಅಂತ ಹೇಳುವುದು ಸರಿಯಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ತಾಲೂಕಿನ ದೊಡ್ಡೇರಿ ಹೋಬಳಿ ಕಿತ್ತಗಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನದಲ್ಲಿ ಸೋಮವಾರ ಸಚಿವ ರಾಜಣ್ಣ ಕುಟುಂಬ ಸಮೇತ ಹೋಮಹವನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಮ ರಾಜಕೀಯದ ರಾಮನ ಮಾಡಲ್ಲಿಕ್ಕೆ ಹೊರಟಿದ್ದಾರೆ. ನಿಜವಾದ ದಶರಥನ ಮಗ ರಾಮನನ್ನ ಮಾಡಬೇಕು. ಮೋದಿ ರಾಮನ ಮಾಡುವುದಲ್ಲ ಎಂದು ಟಾಂಗ್ ಕೊಟ್ಟರು.

ನಾನು ರಾಮನ ಪೂಜೆ ಮಾಡಬಹುದು ಇನ್ನೊಬ್ಬನನ್ನ ಪೂಜೆ ಮಾಡೋದು ಮತ್ತೊಂದು ವಿಚಾರ. ಈ ದೇವಸ್ಥಾವನ್ನ ನಾನು 2006ರಲ್ಲಿ ಕಟ್ಟಿಸಿದ್ದೆ 30 ಲಕ್ಷ ರೂ., ಖರ್ಚು ಮಾಡಿ ದೇವಾಲಯ ಕಟ್ಟಿಸಿದ್ದೆ. ಇವತ್ತಿನ ಲೆಕ್ಕದಲ್ಲಿ ಕೋಟಿಗಟ್ಟಲೆ ಬೆಲೆ ಹೇಳಿಕೊಳ್ಳಬಹುದು.ಶಂಕರಾಚಾರ್ಯ ಗುರುಗಳು ಏನೇನು ಹೇಳಿದ್ದಾರೆ ಅದಕ್ಕೆ ನನ್ನ ಸಹಮತವಿದೆ. ಅದರಲ್ಲಿ ಎರಡನೇ ಮಾತಿಲ್ಲ. ಯಾರೆಲ್ಲಾ ಬಾಬ್ರಿ ಮಸೀದಿಯ ಜಾಗಕ್ಕಾಗಿ ಹೋರಾಟ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಹೆಚ್‌ಪಿ ಸದಸ್ಯರು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ದಾರೆ. ನಾನು ಕೂಡ ಅದನ್ನೇ ಹೇಳುತ್ತಿದ್ದೀನಿ. ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಹಾಕಿದ್ದವರಿಗೆ ಆಹ್ವಾನ ನೀಡಿಲ್ಲ. ಇಷ್ಟು ತರಾತುರಿ ಅಗತ್ಯವೇನು ಇದೆ. ಇದೆಲ್ಲದ್ದನ್ನು ಯೋಚನೆ ಮಾಡಬೇಕಾಗುತ್ತದೆ ಎಂದರು.

ಒಂದು ಧರ್ಮ ಇನ್ನೊಂದು ಧರ್ಮವನ್ನ ದ್ವೇಷ ಮಾಡಬೇಕು ಅಂತ ಯಾವ ಧರ್ಮದಲ್ಲೂ ಇಲ್ಲ. ಜನಗಳಿಗೆಲ್ಲಾ ಒಳ್ಳೇಯದು ಮಾಡಲಿ. ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗಲಿ ಎಂಬುದು ನಮ್ಮ ಪ್ರಾರ್ಥನೆ. ನಮ್ಮ ಆತ್ಮ ನಿಷ್ಕಳಂಕ ಭಕ್ತಿಯಿಂದ ಮಾಡುತ್ತಿರುವ ಪೂಜೆ ಇದು. ನಮ್ಮ ಕರ್ನಾಟಕದ ಪಂಡಿತರು ಒಳ್ಳೆಯ ಮಹೂರ್ತ ನಿಗದಿ ಮಾಡಿದ್ದರಿಂದ ಈಗ ಪೂಜೆ ಮಾಡುತ್ತಿದ್ದೇವೆ. ಅಯೋಧ್ಯಗೆ ನಾವ್ಯಾಕೆ ಹೋಗಬಾರದು? ನಾವೇನು ಅವರಿಗೆ ಜಾಗೀರು ಕೊಟ್ಟೀದ್ದೀವಾ ಎಂದು ಪ್ರಶ್ನಿಸಿದರು.