ಪರಮಾನಂದವಾಡಿಯಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ಶ್ರೀಶೈಲ ಪಾಲಬಾವಿ, ನಾಗಪ್ಪ ಕಂಠಿಕಾರ, ಬಸನಗೌಡ ಆಸಂಗಿ, ಬಸವರಾಜ ಮೂಡಲಗಿ, ಶ್ರೀಧರ ಮೂಡಲಗಿ ಇತರರಿದ್ದರು. 
ಜಿಲ್ಲೆ

ಸಹಕಾರಿ ಸಂಘಗಳು ಗ್ರಾಮೀಣರ ಬೆಳಕು

ಪರಮಾನಂದವಾಡಿ : ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ನೆಲೆಸಿರುವ ರೈತಾಪಿ ವರ್ಗದ ಬಾಳಿಗೆ ಸಹಕಾರಿ ಸಂಘಗಳು ಬೆಳಕಾಗಲಿ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹರಸಿದರು.

ಗ್ರಾಮದಲ್ಲಿ ಶ್ರೀ ಶಿವ-ಬಸವ ಕೃಪಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಘದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸಬೇಕು. ತಮ್ಮ ಬದುಕು ಕಟ್ಟಿಕೊಳ್ಳುವ ಜತೆಗೆ ಸೊಸೈಟಿಗಳನ್ನೂ ಬೆಳೆಸಬೇಕು ಎಂದು ಸಲಹೆ ನೀಡಿದರು. ಗದಗದ ಶಿವಾನಂದ ಬ್ರಹನ್ಮಠದ ಪೀಠಾಧಿಕಾರಿ ಜಗದ್ಗುರು ಸದಾಶಿವಾನಂದ ಭಾರತೀ ಸ್ವಾಮೀಜಿ, ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಕಾರಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಉಗಾರ ಖುರ್ದದ ಗುರುದೇವ ಆಶ್ರಮದ ಬಸವಲಿಂಗ ಸ್ವಾಮೀಜಿ, ಹಾರೂಗೇರಿಯ ಐ.ಆರ್. ಮಠಪತಿ, ಸಿದ್ದಾಪುರದ ಕಾಡಯ್ಯ ಸ್ವಾಮೀಜಿ, ಶಾಸಕ ಪಿ.ರಾಜೀವ್, ಪಿಎಸ್‌ಐ ಶಿವರಾಜ ಧರಿಗೋಣ, ಶ್ರೀಶೈಲ ಪಾಲಬಾವಿ, ನಾಗಪ್ಪ ಕಂಠಿಕಾರ, ಬಸನಗೌಡ ಆಸಂಗಿ, ಬಸವರಾಜ ಮೂಡಲಗಿ, ಶ್ರೀಧರ ಮೂಡಲಗಿ, ಡಾ.ಪ್ರವೀಣ ಮುಂಡಗನೂರ, ಸುರೇಶ ಕದಂ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಇತರರಿದ್ದರು.