ಬೈಲಹೊಂಗಲದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಮಹಾತ್ಮಗಾಂಧಿ, ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು. ಶಾಸಕ ಮಹಾಂತೇಶ ದೊಡ್ಡಗೌಡರ, ಶಿವಾನಂದ, ಈರಣ್ಣ ವಾರದ, ವಿರೂಪಾಕ್ಷಗೌಡ ಪಾಟೀಲ, ಕಾರ್ಯಕರ್ತರು ಉಪಸ್ಥಿತರಿದ್ದರು. 
ಜಿಲ್ಲೆ

ಸಹಕಾರದಿಂದ ಸುಭದ್ರ ಸಮಾಜ ನಿರ್ಮಾಣ

ಬೈಲಹೊಂಗಲ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹಾದೂರ್ ಶಾಸಿ ಅವರ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಭದ್ರ ಸಮಾಜ ನಿರ್ಮಾಣ ಮಾಡೋಣ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದ್ದಾರೆ. ಪಟ್ಟಣದ ಗೃಹ ಕಚೇರಿಯಲ್ಲಿ ಗಾಂಧಿ, ಶಾಸಿ ಅವರ ಜಯಂತಿ ಅಂಗವಾಗಿ ಉಭಯ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶಿವಾನಂದ ಹನುಮಸಾಗರ, ಈರಣ್ಣ ವಾರದ, ವಿರೂಪಾಕ್ಷಗೌಡ ಪಾಟೀಲ, ಕಾರ್ಯಕರ್ತರು ಇದ್ದರು.

ಕಡಬಿ ವರದಿ: ಗ್ರಾಮದ ಗ್ರಾಪಂ ಸಭಾಭವನದಲ್ಲಿ ಗಾಂಧೀಜಿ ಜನ್ಮದಿನ ಆಚರಿಸಲಾಯಿತು. ಪಿಡಿಒ ಸುವರ್ಣಗೌರಿ ಕೊಣ್ಣೂರ, ಗ್ರಾಪಂ ಕಾರ್ಯದರ್ಶಿ ಪ್ರಕಾಶ ಪಾಟೀಲ, ವಿಠ್ಠಲ ದಳವಾಯಿ, ಮಂಜು ವಣ್ನೂರ, ಧನಿಪಾಲ ಹಮ್ಮಣ್ಣವರ, ಕೀರಪ್ಪ ನಡುವಿನ, ದೇಮಣ್ಣ ಎಸ್. ಪರಮೇಶ ಡಿ. ಇದ್ದರು. ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಎಂ.ಬಿ.ಬಿರಾದರಗೌಡ್ರ, ಕೆ.ಎನ್.ಚಿವಟಗುಂಡಿ, ಎನ್.ಎಚ್. ಚನ್ನದಾಸರ, ಎಂ.ಡಿ.ಮಾಳಿ, ಎಂ.ಜೆ.ಅರಕೇರಿ, ವಿ.ಎಂ. ದೊಡಮನಿ, ಸುಜಾತಾ ಪೂಜೇರ, ಸಕ್ಕುಬಾಯಿ ವಿಧಾತೆ ಇದ್ದರು.