raichur 
ಜಿಲ್ಲೆ

ಸಹಕಾರದಿಂದ ಸಸಿ ನೆಡುವ ಕಾರ್ಯಕ್ರಮ

Raichur - Reporter - Rachhai Swamy

 ರಾಯಚೂರು ನಗರದ ಆರ್‌ಡಿಸಿಸಿ ಬ್ಯಾಂಕ್‌ನ ಆವರಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು.

ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೋಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಲೆನಾಡಿನಲ್ಲಿ ಹೆಚ್ಚು ಗಿಡಗಳಿರುವುದರಿಂದ ಅಲ್ಲಿ ಬಿಸಿಲಿನ ತಾಪಮಾನ ಕಡಿಮೆ ಇರುತ್ತದೆ. ಅದೇ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಿಡಗಳ ಸಂಖ್ಯೆ ಕಡಿಮೆ ಇದ್ದುದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಅದಕ್ಕಾಗಿ ಗಿಡಗಳನ್ನು ಬೆಳೆಸುವ ಕಾರ್ಯವಾಗಬೇಕಿದೆ. ಸ್ವಚ್ಛ ಪರಿಸರ ಮತ್ತು ಶುದ್ಧ ಗಾಳಿಯಿಂದ ಜನರು ಆರೋಗ್ಯವಾಗಿರಬಹುದಾಗಿದೆ. ಅದಕ್ಕಾಗಿಯೇ ಏಕ್ ಪೇಡ್ ಮಾ ಕೆ ನಾಮ್ ಹೆಸರಿನಲ್ಲಿ ಪತ್ರಿಯೊಬ್ಬರು ಮನೆಗೊಂದು ಮರ ನೆಟ್ಟು ಸಸ್ಯ ಸಂರಕ್ಷಣೆ ಮಾಡುವಂತೆ ಸಲಹೆ ನೀಡಿದರು.

ಪ್ರದೇಶಿಕ ಅರಣ್ಯ ಅಧಿಕಾರಿ ಪ್ರವೀಣ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸಾರ್ವಜನಿಕರು, ಸಂಘ ,ಸಂಸ್ಥೆಗಳಿಂದ ಮತ್ತು ಸಾಮಾನ್ಯ ಜನರಿಗೆ ವಿತರಿಸಲಾಗುದುವುದು. ಸಂಘ ಸಂಸ್ಥೆಗಳಿಂದ ಗಿಡಗಳು ಬೇಕೆಂದು ಬೇಡಿಕೆ ಬಂದಲ್ಲಿ, ಅದಕ್ಕೆ ಸಮಯಾವಕಾಶ ಕೊಟ್ಟರೆ, ಬೇಡಿಕೆಗೆ ತಕ್ಕಂತೆ ಪೂರೈಸಲು ಕ್ರಮವಿಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕ ಬಸವರಾಜ ಕೊಂಕಲ್,ಎಸ್.ವಿಜಯಕುಮಾರ ಪಾಟೀಲ್ ಶಾವಂತಗೇರಾ, ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ ತೋರಣದಿನ್ನಿ , ಒಕ್ಕೂಟದ ನಿರ್ದೇಶಕರ ಎಸ್.ಜಿ. ಕಲ್ಲಯ್ಯಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿ ರಾಜೇಶ ನಾಯಕ್ ಇದ್ದರು.