filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಸಹಕಾರಿ ಪಾತ್ರ ಮುಖ್ಯ

ಪ್ರಶಾಂತ ಹೂಗಾರ

ಕಾಗವಾಡ: ಸಹಕಾರಿ ಸಂಘಗಳು ರೈತರ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ದಿ.ಸಾ.ರೆ.ಪಾಟೀಲ ಅವರ ದೂರದೃಷ್ಟಿಯೊಂದಿಗೆ ಮಹಾರಾಷ್ಟ್ರದಲ್ಲಿ ಪ್ರಾರಂಭಗೊಂಡ ಬ್ಯಾಂಕ್ ಇಂದು ರಾಜ್ಯದಲ್ಲಿ 5 ಶಾಖೆ ಪ್ರಾರಂಭಿಸಿದೆ ಎಂದು ಕೌಲಗುಡ್ಡ ಸಿದ್ಧ ಸಂಸ್ಥಾನ ಮಠದ ಅಮರೇಶ್ವರ ಮಹಾರಾಜರು ಹೇಳಿದರು.

ಪಟ್ಟಣದ ಸಂಕೇಶ್ವರ-ಜೇವರ್ಗಿ ರಸ್ತೆಯ ಅಮೋಘ ಟಾವರ್ಸ್‌ನಲ್ಲಿ ಸೋಮವಾರ ಡಾ.ಅಪ್ಪಾಸಾಹೇಬ ಉರ್ಫ್ ಸಾ.ರೆ.ಪಾಟೀಲ ಜಯಸಿಂಗಪುರ-ಉದಗಾಂವ ಸಹಕಾರಿ ಬ್ಯಾಂಕ್ (ಮಲ್ಟಿಸ್ಟೇಟ್) ಶಾಖೆ ಉದ್ಘಾಟಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ 15 ಮತ್ತು ಕರ್ನಾಟಕದಲ್ಲಿ 4 ಶಾಖೆ ಹೊಂದಿದ್ದು, ಕಾಗವಾಡದಲ್ಲಿ 20ನೇ ಬ್ಯಾಂಕ್ ಶಾಖೆ ತೆರೆಯಲು ಯೋಜನೆ ರೂಪಿಸಿದೆ ಎಂದರು. ಯತೀಶ್ವರಾನಂದ ಸ್ವಾಮೀಜಿ ಮಾತನಾಡಿದರು.

ಸಹಕಾರ ಮಹರ್ಷಿ ಗಣಪತರಾವ ಪಾಟೀಲ, ಶಿರಗುಪ್ಪಿ ಶುಗರ್ಸ್ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ, ತಹಸೀಲ್ದಾರ್ ರವೀಂದ್ರ ಹಾದಿಮನಿ, ಬ್ಯಾಂಕ್‌ನ ಬೋರ್ಡ್ ಆಫ್ ಮ್ಯಾನೇಜಮೆಂಟ್ ಅಧ್ಯಕ್ಷ ಮಹೇಂದ್ರ ಬಾಗೆ, ಉಪಾಧ್ಯಕ್ಷ ಅಪ್ಪಾಸೋ ನರುಟೆ, ಅಧ್ಯಕ್ಷ ಸುರೇಶ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಘುನಾಥ ಪಾಟೀಲ, ಸಂಚಾಲಕರಾದ ಅರುಣ ದೇಸಾಯಿ, ಅಮರ ಯಾದವ, ವಿಶ್ವನಾಥ ಮಾನೆ, ಜ್ಯೋತಿಕುಮಾರ ಪಾಟೀಲ, ನಿಜಗೊಂಡ ಪಾಟೀಲ, ಮಿಲಿಂದ ಜಗದಾಳೆ, ರಾಕೇಶ್ ದರ್ಜೆ, ವಿನಾಯಕ ಕದಮ್, ಜನಾರ್ಧನ ಬೋಟೆ, ಸುರಗೌಡ ಪಾಟೀಲ, ಅಜಿತ್ ಚೌಗುಲೆ, ರಮೇಶ ಪಾಟೀಲ, ಕಾಕಾ ಪಾಟೀಲ, ಸೌರಭ ಪಾಟೀಲ, ಅಣ್ಣಾಸಾಹೇಬ ಕಠಾರೆ, ರಮೇಶ ಚೌಗುಲೆ ಇತರರಿದ್ದರು.