ಗದಗ:
ಕೃಷಿ ಪತ್ತಿನ ಸಹಕಾರ ಸಂಗಳ ಹೆಸರನ್ನು ಬದಲಾಯಿಸಿಕೊಳ್ಳಲು ಉಪವಿಧಿಯನ್ನು ಜಾರಿಮಾಡಲಾಗಿದ್ದು, ಮಾದರಿ ಉಪವಿ-ಧಿಗಳನ್ನು 60 ದಿನಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಸರ್ಕಾರ ಆದೇಶ ಉಲ್ಲಂಘಿಸಿದಂತಾಗುತ್ತದೆ ಎಂದು ಬೆಳಗಾವಿ ಪ್ರಾಂತದ ಸಹಕಾರ ಸಂಗಳ ಸಂಯುಕ್ತ ನಿಬಂಧಕ ಡಾ. ಸುರೇಶಗೌಡ ಪಾಟೀಲ ಹೇಳಿದರು.
ರೋಟರಿ ಕಮ್ಯುನಿಟಿ ಕೇರ್ ಸೆಂಟರ್ ಶನಿವಾರ ಶನಿವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ದಘಾಟಿಸಿ ಮಾತನಾಡಿದ ಅವರು, ಮರು ನಾಮಕರಣ ಮಾಡದೇ ಇದ್ದರೆ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕರು ಹೊಣೆಗಾರರು ಆಗುತ್ತಾರೆ. ಈ ಹಿಂದೆ ಸಂದ ಹೆಸರಿನಲ್ಲಿ ಕೇವಲ ಕೃಷಿ ಪತ್ತಿನ ಸಹಕಾರ ಸಂ ಎಂದು ಮಾತ್ರ ನಮೂದಾಗಿತ್ತು. ಈಗ ಮಾದರಿ ಬೈಲಾದಲ್ಲಿ ಗ್ರಾಮೀಣ ಭಾಗದ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳಿಗೆ ಸಾಲ ನೀಡುವುದರ ಜತೆಗೆ ಸಂಗಳು ವಿವಿಧ ಉದ್ದೇಶಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ರೈತರಿಗೆ ಏಕ ಗವಾ ಸೌಲಭ್ಯಗಳು ದೊರೆಯುದಲ್ಲದೆ, ಸಂಗಳು ಸಹ ಆಥಿರ್ಕವಾಗಿ ಅಭಿವೃದ್ದಿಯಾಗಲು ಅನುಕೂಲವಾಗಲಿದೆ. ಹಾಗಾಗಿ ಸಂದ ಹೆಸರನ್ನು ಮರುನಾಮಕರಣ ಮಾಡಿಕೊಳ್ಳಬೇಕು ಎಂದುರು.
ಜಿಲ್ಲಾ ಸಹಕಾರ ಸಂದ ಅಧ್ಯ ಸಿ.ಎಂ. ಪಾಟೀಲ ಮಾತನಾಡಿ, ಏಕ ರೂಪದ ಕನಿಷ್ಠ ಶೇರು ಮೊತ್ತ 1000 ರೂ. ನಿಗದಿ ಪಡಿಸಲಾಗಿದೆ. ನೂತನ ಮಾದರಿ ಬೈಲಾ ಅಳವಡಿಸಿಕೊಂಡ ಮುಂಬರುವ ವಾಷಿರ್ಕ ಮಹಾಸಭೆಯಲ್ಲಿ ಸದಸ್ಯರ ಗಮನಕ್ಕೆ ತರತಕ್ಕದ್ದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಉಪಾಧ್ಯ ಶಿವಕುಮಾರಗೌಡ ಪಾಟೀಲರವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಸಹಕಾರ ಸಂಗಳ ಉಪನಿಬಂಧಕಿ ಎಸ್. ಎಸ್. ಕಬಾಡೆ, ವಿದ್ಯಾ ಹೊನ್ನಶೆಟ್ಟಿ, ಪ್ರಶಾಂತ ಮುಧೋಳ, ರಾಧಾ ಗೋಕಾಕ, ಚಂದ್ರಶೇಖರ ಕರಿಯಪ್ಪನವರ ಇತರರು ಇದ್ದರು.