ಬೆಳಗಾವಿ ಮಾರುತಿ ಗಲ್ಲಿಯ ಸಮರ್ಥ ಸೊಸೈಟಿಯ ರಜತ ಮಹೋತ್ಸವ ನಿಮಿತ್ತ ಸ್ವಾಮಿ ಸಮರ್ಥರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನರಹರಿ ಡಿ.ಜೋಶಿ, ಸುಹಾಸ ಕುಲಕರ್ಣಿ, ಅಜಯ ಸುನಾಳಕರ, ಅರವಿಂದ ಕುಲಕರ್ಣಿ, ರಾಘವೇಂದ್ರ ಕೇಸನೂರ ಇದ್ದರು. 
ಜಿಲ್ಲೆ

ಸಹಕಾರದಿಂದ ಸಮರ್ಥ ಸೊಸೈಟಿ ಪ್ರಗತಿ

Belagavi

ಬೆಳಗಾವಿ: ಸಮರ್ಥ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಆರಂಭವಾಗಿ 24 ವರ್ಷ ಪೂರೈಸಿ, ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಸಂಸ್ಥೆಯ ಬೆಳವಣಿಗೆಗೆ ಅನೇಕರು ಸಹಕರಿಸಿದ್ದಾರೆ. ಅವರಿಗೆಲ್ಲ ಕೃತಜ್ಞ ಎಂದು ಸೊಸೈಟಿ ಅಧ್ಯಕ್ಷ ನರಹರಿ ಡಿ. ಜೋಶಿ ಹೇಳಿದ್ದಾರೆ.

ಮಾರುತಿ ಗಲ್ಲಿಯ ಮುಖ್ಯ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೊಸೈಟಿ ರಜತ ಮಹೋತ್ಸವದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿ ಸೊಸೈಟಿಯ ಎಲ್ಲ ಸದಸ್ಯರು, ಠೇವಣಿದಾರರು, ಗ್ರಾಹಕರು, ಸಾಲಗಾರರು ಮತ್ತು ಹಿತೈಷಿಗಳ ಸಹಕಾರದೊಂದಿಗೆ ಸಮರ್ಥ ಸೊಸೈಟಿ ವೇಗವಾಗಿ ಪ್ರಗತಿ ಹೊಂದುತ್ತಿದೆ ಎಂದರು. ಸಂಸ್ಥೆ ಉಪಾಧ್ಯಕ್ಷ ಸುಹಾಸ ಕುಲಕರ್ಣಿ, ಸಂಚಾಲಕ, ಅಜಯ ಸುನಾಳಕರ, ಗಣಪತಿ ಕುಲಕರ್ಣಿ, ವಿನಾಯಕ ಜೋಶಿ, ವಿನಯ ಕುಲಕರ್ಣಿ, ಪ್ರದೀಪಕುಮಾರ ಕುಲಕರ್ಣಿ, ಸುನಂದಾ ಆಳತೇಕರ, ಛಾಯಾ ಎನ್. ಜೋಶಿ, ಅನಿಲ ಭಂಡಾರಿ, ಪರಶುರಾಮ ಕಾಂಬಳೆ, ಉಮೇಶ ಸುಣಗಾರ, ಅಶೋಕ ಪೂಜಾರಿ, ಅರವಿಂದ ಕುಲಕರ್ಣಿ, ರಾಘವೇಂದ್ರ ಕೇಸನೂರ ಇದ್ದರು.