ಜಿಲ್ಲೆ

ಮರ್ಚಂಟ್ಸ್​ ಅರ್ಬನ್​ ಕೋಆಪ್​ರೇಟಿವ್​ ಬ್ಯಾಂಕ್​ 68 ನೇ ವಾಷಿರ್ಕ ಸಭೆ, 93 ಲಕ್ಷ ಲಾಭ ಗಳಿಕೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
2022 -23ನೇ ಸಾಲಿನಲ್ಲಿ ಗದಗಿನ ಮರ್ಚಂಟ್ಸ್​ ಅರ್ಬನ್​ ಕೋಆಪರೇಟಿವ್​ ಬ್ಯಾಂಕ್​ 93.12 ಲಕ್ಷ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯ ಕೆ. ಎಸ್​. ಚಟ್ಟಿ ತಿಳಿಸಿದರು.
ರವಿವಾರ ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ನಡೆದ ಬ್ಯಾಂಕಿನ 68ನೇ ವಾಷಿರ್ಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ರಿಝರ್ವ ಬ್ಯಾಂಕಿನ ಕಟುನಿಟ್ಟಿನ ಧೋರಣೆ, ದೇಶದ ಆಥಿರ್ಕ ಸಂಕಷ್ಟಗಳ ನಡುವೆಯು ಬ್ಯಾಂಕ್​ 93.12 ಲ ರೂ. ಲಾಭ ಗಳಿಸಿದೆ. ಬ್ಯಾಂಕಿನ ರಿಝರ್ವ ಮತ್ತು ಇತರೆ ಂಡ್​ 6. 21 ಕೊಟಿ ರೂ, ಠೇವಣಿ ಮೊತ್ತ 29.90 ಕೋಟಿ, ಸಾಲದ ಮೊತ್ತ 20 ಕೋಟಿ ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ತಾಂತ್ರಿಕ ಕೌಶಲ್ಯದಿಂದ ಇಂದು ಗ್ರಾಹಕರ ನಿರೀೆ ಮತ್ತು ಅವರ ಸೇವೆಯಲ್ಲಿ ಅಪಾರ ಪರಿವರ್ತನೆ ಬಂದಿದೆ. ದೇಶದಲ್ಲಿ ಖಾಸಗಿ, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳ ಪೈಪೋಟಿಯನ್ನು ಪಟ್ಟಣ ಸಹಕಾರ ಬ್ಯಾಂಕುಗಳು ಎದುರಿಸಿ ನಿಲ್ಲಬೇಕಾಗಿದೆ. ಬ್ಯಾಂಕಿನ ಸದಸ್ಯರು ಸಭೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶೈಲಜಾ ಎನ್​, ಮಹಾಂತೇಶಸ್ವಾಮಿ ವಸ್ತ್ರದ, ಸಿದ್ಧಲಿಂಗನಗೌಡ ಕಲ್ಲನಗೌಡ್ರ, ಚೇತನ ಅಂಗಡಿ, ಶಿವಕುಮಾರ ಶೆಲ್ಲಿಕೇರಿ,ನಾಗರಾಜಗೌಡ ಪಾಟೀಲ ವಿರುಪಾಪ್ಪ ಮೂರಶಿಳ್ಳಿನ, ಕಂಟೆಪ್ಪ ಗುಗ್ಗರಿ, ಪಂಚಾರಯ್ಯ ಭಿಾವತಿಮಠ, ಗಂಗಾಧರ ಥಡಿ, ರಾಮನಗೌಡ ಚಿಕ್ಕನಗೌಡ್ರ, ಸಿ. ಆರ್​. ಡವಳಗಿ, ವಿ. ಎಸ್​. ಕೂಗು, ವಿ. ಎ್​. ಮೂರಶಿಳ್ಳಿನ, ಕೆ. ಎಸ್​. ಗುಗ್ಗರಿ, ಎಸ್​. ಎಸ್​. ಉಮಚಗಿ ಇತರರು ಇದ್ದರು.