ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ 25ನೇ ಸೌಹಾರ್ದ ಸಹಕಾರ ದಿನಾಚರಣೆಯ ಧ್ವಜಾರೋಹಣವನ್ನು ಅಧ್ಯಕ್ಷ ಮಲ್ಲಪ್ಪ ಮದಲಮಟ್ಟಿ ನೆರವೇರಿಸಿದರು. ಡಾ. ಸುರೇಶ ಸಲಬನ್ನವರ ಇತರರಿದ್ದರು. 
ಜಿಲ್ಲೆ

ಸಂಸ್ಥೆಗಳ ಬೆಳವಣಿಗೆಗೆ ಸಹಕಾರ ಅಗತ್ಯ

ತೇರದಾಳ: ಸಹಕಾರಿ ಕ್ಷೇತ್ರದಲ್ಲಿ ಸಾರ್ವಜನಿಕರ ಸಹಕಾರದಿಂದಲೇ ಹಣಕಾಸು ಸಂಸ್ಥೆಗಳು ನಿರಂತರ ಬೆಳೆಯಲು ಸಾಧ್ಯ ಎಂದು ಡಾ. ಸುರೇಶ ಸಲಬನ್ನವರ ಹೇಳಿದರು.

ತಾಲೂಕಿನ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಬುಧವಾರ ನಡೆದ 25ನೇ ಸೌಹಾರ್ದ ಸಹಕಾರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಮಲ್ಲಪ್ಪ ಮದಲಮಟ್ಟಿ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಮಾನಿಂಗ ಶೇಗುಣಸಿ, ವ್ಯವಸ್ಥಾಪಕ ಗುಂಡುರಾವ್ ಕಡಹಟ್ಟಿ, ಪಿಯು ಕಾಲೇಜು ಪ್ರಾಚಾರ್ಯ ಎಂ.ಎಸ್. ಮೂಡಸಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಿದ್ದು ಕಮದಿನ್ನಿ, ದೈಹಿಕ ಶಿಕ್ಷಕ ಎಸ್.ಎಂ. ಸಾಲೋಟಗಿ, ಉಪನ್ಯಾಸಕ ಪ್ರವೀಣ ಬುದ್ನಿ ಇತರರಿದ್ದರು.