ಜಿಲ್ಲೆ

ಅಭಿವೃದ್ಧಿಗೆ ಸಹಕಾರ ಅಗತ್ಯ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ಅನಗತ್ಯ ತಂಟೆ-ತಕರಾರು ಮಾಡದೆ ರಸ್ತೆ ಅಗಲೀಕರಣಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು. ಜತೆಗೆ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ನಂದಿಹಾಳ-ಕಾಡರಕೊಪ್ಪ ರಸ್ತೆಯ 50 ಲ ರೂ. ವೆಚ್ಚದ ಅಭಿವೃದ್ಧಿಗೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಸ್ಥರ ಇನ್ನುಳಿದ ಬೇಡಿಕೆ ಹಂತ ಹಂತವಾಗಿ ಈಡೇರಿಸಲಾಗುವುದು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

ಮುಖಂಡರಾದ ರಾಮಣ್ಣ ಬೀಡಕಿ, ಬಸನಗೌಡ ಪ್ಯಾಟಿಗೌಡ್ರ, ಖಾನಗೌಡ ಪಾಟೀಲ, ಹನುಮಂತ ದೇಸಾಯಿ, ಸದಾಶಿವ ಮಾದರ, ಲ$್ಮಣ ಲಮಾಣಿ, ರಾಜು ವಾಸನ, ರಂಗಪ್ಪ ಚನ್ನಪ್ಪಗೌಡ್ರ, ರಾಜು ಮಾನೆ, ಭೀಮಶಿ ಬಂಡಿವಡ್ಡರ, ಜುಲೆಪ್ಪ ಲಮಾಣಿ ಇತರರಿದ್ದರು.