ಸವಣೂರ: ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಪರಸ್ಪರ ಸಹಕಾರ ಅವಶ್ಯವಾಗಿದೆ ಎಂದು ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯ ರಿಜನಲ್ ಕೋ ಆರ್ಡಿನೇಟರ್ ರವಿಕುಮಾರ ಹೊಟ್ಟೂರ ಹೇಳಿದರು.
ತಾಲೂಕಿನ ಜಲ್ಲಾಪುರ ಗ್ರಾಮದ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ, ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆ, ಬೆಲ್‌ಸ್ಟಾರ್ ಮೈಕ್ರೋ ೈನಾನ್ಸ್ ಸಂಸ್ಥೆಯಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬೆಲ್‌ಸ್ಟಾರ್ ಮೈಕ್ರೋ ೈನಾನ್ಸ್ ಸಂಸ್ಥೆಯ ರೀಜನಲ್ ಹೆಡ್ ರಾಜಶೇಖರ ಮಾತನಾಡಿ, ಸಾಲ ಸೌಲಭ್ಯ ಪಡೆದುಕೊಳ್ಳುವ ಮಹಿಳೆಯರು ಉತ್ತಮ ಜೀವನ ನಿರ್ವಹಣೆಯೊಂದಿಗೆ ಆದಾಯ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎಂದರು.
ಕವಿತಾ ಅರಳಿಹಳ್ಳಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.
ಗೀತಾ ನಿಂಗನೌಡ್ರ ಮಾತನಾಡಿದರು. ಪಿಡಿಒ ವೀರೇಶ ಆವಾರಿ ಅವರು ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳ ಕುರಿತು ವಿವರಿಸಿದರು. ಎಸ್‌ಐಆರ್‌ಡಿ ತರಬೇತಿದಾರ ಶಿವಕುಮಾರ ಹಿರೇಮಠ, ಸಂಸ್ಥೆಯ ಬಿ.ಎಂ. ಕೌಶಲ್ಯಾ ಉಪನ್ಯಾಸ ನೀಡಿದರು. ವಿವಿಧ ರಂಗದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಶೈಲಾ ರಾಮಣ್ಣನವರ ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರತ್ನವ್ವ ಹರಿಜನ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಹುಲಿಗೆಮ್ಮ ಗೌಡಗೇರಿ, ಕೀರಗೌಡ ಅರಳಿಹಳ್ಳಿ, ದೇವಪ್ಪ ಬಡಿಗೇರ, ತಾಪಂ ಟಿಪಿಎಂ ಬಸವರಾಜ ಎಚ್.ಎಂ., ಎಂಬಿಕೆ ಮಂಜುಳಾ, ಪ್ರಮುಖರಾದ ಮಂಜುನಾಥ ಬಿ.ಎಂ. ಇತರರಿದ್ದರು.