ಜಿಲ್ಲೆ

ಹೆಜಮಾಡಿ ಪ.ಪೂ ಕಾಲೇಜು ಅಭಿವೃದ್ಧಿಗೆ ಸಹಕಾರ

ಇಂದಿರಾ ಎನ್ ಕೆ

ಪಡುಬಿದ್ರಿ: ಹೆಜಮಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ಅಭಿವೃದ್ಧಿಗೆ, ಮಕ್ಕಳ ದಾಖಲಾತಿ ಉನ್ನತಿಗಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು.

ಹೆಜಮಾಡಿ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳೇ ವಿದ್ಯಾರ್ಥಿ ಸಂಘದ ಶೇಷಗಿರಿ ರಾವ್, ಲೋಕೇಶ್ ಅಮೀನ್ ಹೆಜಮಾಡಿ, ಗ್ರಾಪಂ ಅಧ್ಯಕ್ಷೆ ರೇಷ್ಮಾ ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಸದಸ್ಯೆ ಸರಿನಾ ನ್ಯಾನ್ಸಿ ಡಿ.ಅಲ್ಮೇಡಾ, ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಶಿವರಾಮ ಶೆಟ್ಟಿ, ಎಲೈಸಿ ನಿವೃತ್ತ ಅಧಿಕಾರಿ ರಾಜು ಹೆಜಮಾಡಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಾರ್ಜ್ ಡಿ.ಅಲ್ಮೇಡಾ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸತೀಶ್ ಕೆ.ನಾಯಕ್ ಉಪಸ್ಥಿತರಿದ್ದರು. ಕಾಲೇಜು ಪ್ರಭಾರ ಪ್ರಾಂಶುಪಾಲ ವಿನ್ಸೆಂಟ್ ವಿನೋದ್ ಡಿಸೋಜ, ಪ್ರೌಢಶಾಲಾ ವಿಭಾಗ ಶಿಕ್ಷಕಿ ಸಂಪಾವತಿ ವರದಿ ವಾಚಿಸಿದರು.

ಪ್ರೌಢಶಾಲಾ ವಿಭಾಗ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ, ಸಹಶಿಕ್ಷಕಿ ಅನಿತಾ, ದೀಪಾ ಎನ್.ಉಡುಪ, ಉಪನ್ಯಾಸಕರಾದ ಶ್ರುತಿಕಾ, ಚೈತನ್ಯ, ಸ್ವರ್ಣ, ಅತಿಥಿ ಶಿಕ್ಷಕಿ ಶೀತಲ್, ಗೌರವ ಶಿಕ್ಷಕಿ ಅಮೃತಾ ದತ್ತಿನಿಧಿ ಮತ್ತು ಪಠ್ಯ-ಪಠ್ಯೇತರ ಸ್ಪರ್ಧೆಗಳಲ್ಲಿ ವಿಜೇತರ ಬಹುಮಾನ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ದೀಪಾ ಎನ್. ಉಡುಪ ವಂದಿಸಿದರು. ಸಹಶಿಕ್ಷಕಿ ಸರೋಜಾ ಆಚಾರಿ ಕಾರ್ಯಕ್ರಮ ನಿರೂಪಿಸಿದರು.