ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಪಂನಿಂದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಗೌರವಿಸಲಾಯಿತು 
ಜಿಲ್ಲೆ

ದೊಡ್ಡಮಾಗರವಳ್ಳಿ ಗ್ರಾಪಂ ಅಭಿವೃದ್ಧಿಗೆ ಸಹಕಾರ

ಜಿ.ಹೆಚ್. ಧನ್ಯಕುಮಾರ್

ಆಲ್ದೂರು: ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಪಂನ ಮೇಲ್ಛಾವಣಿ ನಿರ್ಮಾಣಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕಿ ನಯನಾ ಮಾತನಾಡಿ, ದೊಡ್ಡಮಾಗರವಳ್ಳಿ ಗ್ರಾಪಂ ಪ್ರತಿ ವರ್ಷ ಜನಸಂಪರ್ಕ ಸಭೆ ಆಯೋಜಿಸಿ ಈ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರು ತಮ್ಮ ಭಾಗದ ಸಮಸ್ಯೆಗಳಿದ್ದರೆ ನಮ್ಮ ಮನೆಗೆ ಯಾವಾಗ ಬೇಕಾದರೂ ಬರಬಹುದು. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲಾಗುವುದು. ನನ್ನ ಅವಧಿಯಲ್ಲಿ ಈ ಪಂಚಾಯಿತಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.
ಆಲ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಮುದಾಬೀರ್, ಹೋಬಳಿ ಅಧ್ಯಕ್ಷ ಪೂರ್ಣೇಶ್ ಕೆಳಗೂರು, ಕಾರ್ಯದರ್ಶಿ ಸುರೇಶ್ ಆಚಾರ್ಯ, ಉಮೇಶ್ ದೇವರಹಳ್ಳಿ, ಗುತ್ತಿಗೆದಾರ ಇಬ್ರಾಹಿಂ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಮೇಘನಾ, ಸದಸ್ಯರಾದ ರಂಜಿತ್ ಡಿ.ಪಿ., ಲೋಕೇಶ್, ಜ್ಯೋತಿ, ಸುಮಿತ್ರಾ, ಪೂರ್ಣೇಶ್, ನಂದಿನಿ, ರಾಜು, ಎಂ.ಸಿ.ದೊಡ್ಡಯ್ಯ, ಸಿಬ್ಬಂದಿ ನಾರಾಯಣ್ ಇದ್ದರು.