ಅಂಕಲಗಿ: ಸಹಕಾರ, ಒಗ್ಗಟ್ಟಿನಿಂದ ಕಾರ್ಯ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಭಾನುವಾರ ಸಮೀಪದ ಅಕ್ಕ ತಂಗೇರಹಾಳ ಗ್ರಾಮದಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಭಿನ್ನಾಭಿಪ್ರಾಯ ಮರೆತು ಒಂದಾಗಿ ಕಾರ್ಯ ಮಾಡೋಣ. ನಾನು ಕ್ಷೇತ್ರದ ಅಭಿವೃದ್ಧಿಗೆ ಬದ್ಧನಿದ್ದೇನೆ ಎಂದರು. ಬಸಪ್ಪ ಉರಬಿನಹಟ್ಟಿ ಮಾತನಾಡಿ, ಸಚಿವ ರಮೇಶ ಎಲ್ಲರನ್ನೂ ತನ್ನೊಟ್ಟಿಗೆ ಕರೆದೊಯ್ಯುವ ಸ್ವಭಾವದವರು. ಇದರಿಂದಾಗಿ ಅವರು ಕ್ಷೇತ್ರದಲ್ಲಿ ಸೋಲನ್ನರಿಯದ ಸರದಾರರೆನಿಸಿದ್ದಾರೆ ಎಂದರು. ಎಸ್.ಎನ್.ಡೋಣಿ, ರಾಜು ತಳವಾರ, ಭೀಮಗೌಡ ಪೋಲಿಸ್‌ಗೌಡರ, ಶಿವಾನಂದ ಕರಲಿಂಗಣ್ಣವರ, ಬಿ.ಬಿ. ನಿರ್ವಾಣಿ, ಮುನ್ನಾ ದೇಸಾಯಿ, ಚನಗೌಡ ಪಾಟೀಲ, ಡಾ.ಮೋಹನ ಕಮತ, ಅಡಿವೆಪ್ಪ ನಾವಲಗಟ್ಟಿ , ಶೋಭಾ ನಾಯಿಕ, ಶಿವನಪ್ಪ ಕುಂದರಗಿ, ಸುನೀಲ ಮಾಸ್ತಿ, ವಿ.ಬಿ. ಈಶ್ವರಪ್ಪಗೋಳ, ಸಂಜು ಕರಲಿಂಗಣ್ಣವರ, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.