ಪಂಕಜ ಕೆ.ಎಂ. ಬೆಂಗಳೂರು
ವರಮಹಾಲಕ್ಷ್ಮೀ ಹಾಗೂ ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದ್ದು, ಮನೆಯಲ್ಲಿ ಕರಿದ ಪದಾರ್ಥಗಳ ತಯಾರಿ ಜೋರಾಗಿರುತ್ತದೆ. ಜತೆಗೆ ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡುವ ಕಡೆಗಳಲ್ಲಿ ಹೋಟೆಲ್ ಹಾಗೂ ಬೇಕರಿಗಳಿಂದ ಕರಿದ ಪದಾರ್ಥಗಳನ್ನು ತಂದು ವಿತರಿಸಲಾಗುತ್ತದೆ. ಅದೇನೆ ಇರಲಿ, ಜನರು ಪ್ರಸಾದ ಎಂದು ಭಕ್ತಿಯಿಂದ ಸೇವಿಸುತ್ತಾರೆ. ಇಂತಹ ಪದಾರ್ಥಗಳ ಸೇವನೆ ಬಗೆಗೆ ಎಚ್ಚರ ಇರಲಿ.
ಹಬ್ಬಕ್ಕಾಗಿ ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ ಸೇರಿ ಇತರೆ ತಿನಿಸುಗಳನ್ನು ತಯಾರಿಸುವಾಗ ಒಮ್ಮೆ ಕಾಯಿಸಿದ ಎಣ್ಣೆಯನ್ನೇ ಮರುಬಳಕೆ ಮಾಡುವುದು ಸಾಮಾನ್ಯ. ಹೀಗೆ ಹೆಚ್ಚಿನ ತಾಪಮಾನದಲ್ಲಿ ಕಾಯಿಸಿದ ಎಣ್ಣೆಯನ್ನು ಮರು ಬಳಕೆ ಅಥವಾ ಸಂಗ್ರಹಿಸಿ ಇತರೆ ಅಡುಗೆಗೆ ಬಳಕೆ ಮಾಡಲಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಈ ತಪ್ಪನ್ನು ಯಾರೂ ಮಾಡದಿರಿ. ಒಮ್ಮೆ ಕರಿದ ಪದಾರ್ಥಗಳಿಗೆ ಬಳಕೆ ಆಗುವ ಎಣ್ಣೆಯನ್ನು ಮತ್ತೆ ಆಡುಗೆಗೆ ಬಳಕೆ ಮಾಡುವುದರಿಂದ ಕ್ಯಾನ್ಸರ್ ಸೇರಿ ನಾನಾ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಅದು ಮನೆಯಲ್ಲಿ ಮಾಡಿದ ಅಡುಗೆ ಇರಲಿ, ಇಲ್ಲವೇ ಬಲು ಇಷ್ಟಪಟ್ಟು ಮನೆಯ ಹೊರಗೆ ಸೇವಿಸುವ ತಿನಿಸುಗಳಿರಲಿ ಈ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲವಾದಲ್ಲಿ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ ಎನ್ನುತ್ತಾರೆ ತಜ್ಞರು.
ಟ್ರಾನ್ಸ್ ಫ್ಯಾಟ್:
ಇದು ಸಾಮಾನ್ಯ ಕೊಬ್ಬಿನ ದುಷ್ಟ ಅವಳಿ ರೂಪ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ವಿಷಕಾರಿ ಎಂದು ಕರೆಯುತ್ತದೆ. ಸಾಮಾನ್ಯವಾಗಿ ಬೀದಿಬದಿಯ ಆಹಾರಗಳಾದ ಸಮೋಸಾ, ಕಚೋರಿ, ಜಿಲೇಬಿ, ಬೋಂಡ, ಬಜ್ಜಿ, ವಡೆ, ಜೋಲೆ ಭಟುರೆ, ಚಿಪ್ಸ್ ಮತ್ತು ಡೀಪ್ ಪ್ರೈ ಪದಾರ್ಥಗಳಲ್ಲಿ ಅಂದರೆ ದಿನವಿಡೀ ಎಣ್ಣೆ ಮರುಬಳಕೆ ಮಾಡುವ ಆಹಾರಗಳಲ್ಲಿ ಟ್ರಾನ್‌ಸ್ಯ್ಾಟ್ ಸೇರಿರುತ್ತದೆ. ಅದೇ ರೀತಿ ಬೇಕರಿ ಉತ್ಪನ್ನಗಳಾದ ಬಿಸ್ಕತ್ತು, ಪ್, ಕೇಕ್ ಇತ್ಯಾದಿ ಪದಾರ್ಥಗಳಲ್ಲೂ ಇದನ್ನು ಕಾಣಬಹುದಾಗಿದೆ.
ಅನಾರೋಗ್ಯಕ್ಕೆ ದಾರಿ:
ಹೋಟೆಲ್, ಬೇಕರಿ ಮಾತ್ರವಲ್ಲದೆ ಮನೆಯಲ್ಲೂ ವನಸ್ಪತಿ ತುಪ್ಪ ಹಾಗೂ ಅಡುಗೆ ಎಣ್ಣೆಯನ್ನು ಪದೇಪದೆ ಬಿಸಿ ಮಾಡಿ ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಸಾಧ್ಯತೆ ಹೆಚ್ಚಿದೆ. ಮಾತ್ರವಲ್ಲದೆ ದೇಹದಲ್ಲಿನ ಒಳ್ಳೆಯ ಕೊಬ್ಬನ್ನು ನಾಶಪಡಿಸಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ದೇಹವನ್ನು ಇನ್ಸುಲಿನ್ ನಿರೋಧಕವಾಗಿಸಿ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ದೇಹದಲ್ಲಿ ಸದ್ದಿಲ್ಲದಂತೆ ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ. ಈ ರೀತಿ ಟ್ರಾನ್‌ಸ್ಯ್ಾಟ್ ಹೊಂದಿರುವ ಆಹಾರ ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅಂತಹ ಪದಾರ್ಥಗಳನ್ನು ಸೇವಿಸಿದಾಗ ಹೊಟ್ಟೆ ತುಂಬಿದಂತೆ ಅನ್ನಿಸುವುದಿಲ್ಲ. ಹಾಗಾಗಿ ಅತಿಯಾಗಿ ತಿನ್ನಲು ಪ್ರೇರೇಪಿಸುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ. ಜತೆಗೆ ಬೊಜ್ಜಿಗೆ ಕಾರಣವಾಗುತ್ತದೆ.
ಎಚ್ಚರಿಕೆ ಹೇಗೆ?
* ಟ್ರಾನ್ಸ್ ಫ್ಯಾಟ್ ಪಾರಾಗಲು ಹೊರಗಿನ ಆಹಾರ ಸೇವನೆ ಬಗ್ಗೆ ಗಮನ ಇರಿಸಿ. ಯಾವುದೇ ಪ್ಯಾಕ್ ಮಾಡಿದ ಆಹಾರ ಖರೀದಿಸುವಾಗ ಮೊದಲು ಅದರಲ್ಲಿ ಬಳಕೆ ಮಾಡಿರುವ ಪದಾರ್ಥಗಳ ಪಟ್ಟಿ ಪರಿಶೀಲಿಸಿ, ಅಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ಟ್ರಾನ್ಸ್ ಫ್ಯಾಟ್ ಲೋಗೋ ಗಮನಿಸಿ.
* ನಿಮ್ಮ ಅಡುಗೆ ಮನೆಯಿಂದ ವನಸ್ಪತಿಯನ್ನು ಹೊರಗೆ ಎಸೆಯಿರಿ. ಸಾಸಿವೆ, ನೆಲಗಡಲೆ ಅಥವಾ ಸೂರ್ಯಕಾಂತಿ ಎಣ್ಣೆಯಂತಹ ಆರೋಗ್ಯಕರ ಎಣ್ಣೆಗಳನ್ನು ಬಳಸಿ. ಇವುಗಳನ್ನೂ ಮಿತವಾಗಿ ಬಳಕೆ ಮಾಡಿ.
* ಡೀಪ್ ಫ್ರೈ ಮಾಡಲು ಅಡುಗೆ ಎಣ್ಣೆಯನ್ನು ಹಲವು ಬಾರಿ ಮರುಬಳಕೆ ಮಾಡಬೇಡಿ. ಹೆಚ್ಚಿನ ತಾಪಮಾನದಲ್ಲಿ ಎಣ್ಣೆಯನ್ನು ಬಿಸಿ ಮಾಡುವುದರಿಂದ ಟ್ರಾನ್‌ಸ್ಯ್ಾಟ್ ಉತ್ಪತ್ತಿಯಾಗುತ್ತದೆ. ಪ್ರತಿ ಬಾರಿ ಕಡಿಮೆ ಪ್ರಮಾಣದಲ್ಲಿ ತಾಜಾ ಎಣ್ಣೆ ಬಳಕೆ ಉತ್ತಮ.
* ಹೊರಗಿನ ಆಹಾರ ಸೇವನೆ ಮಿತಗೊಳಿಸಿ. ಸಾಧ್ಯವಾದಷ್ಟೂ ಮನೆಯಲ್ಲೇ ತಯಾರಿಸಿದ ಆಹಾರ ಸೇವನೆಗೆ ಆದ್ಯತೆ ನೀಡಿ.
ಬಳಸಿದ ಎಣ್ಣೆ ಇಂಧನವಾ ಪರಿವರ್ತನೆ:
ಮನೆಯೇ ಆಗಿರಲಿ ಹೋಟೆಲ್, ಬೇಕರಿ ಯಾವುದೇ ಆಹಾರ ತಯಾರಿಕಾ ಘಟಕವಾಗಿರಲು. ಒಮ್ಮೆ ಕಾಯಿಸಿದ ಎಣ್ಣೆಯನ್ನು ಪುನಃ ಬಳಸಬಾರದು. ವ್ಯರ್ಥ ಆಗುತ್ತದೆ ಎಂದು ಮತ್ತೊಮ್ಮೆ ಉಪಯೋಗಿಸುವ ಬದಲು ಅದನ್ನು ಸಂಗ್ರಹಿಸಿ ಜೈವಿಕ ಇಂಧನ ಅಥವಾ ಸೋಪ್ ಆಗಿ ಪರಿವರ್ತಿಸಿ ವಾಹನಕ್ಕೆ ಬಳಕೆ ಮಾಡಬಹುದಾಗಿದೆ. ಭಾರತದಲ್ಲಿ ದೊಡ್ಡ ಹೋಟೆಲ್‌ಗಳು ಹಾಗೂ ಬೇಕರಿಗಳು ಬಳಸಿದ ಎಣ್ಣೆಯನ್ನು ಸಣ್ಣ ಪುಟ್ಟ ಹೋಟೆಲ್ ಹಾಗೂ ಬೀದಿಬದಿ ವ್ಯಾಪಾರಿಗಳು ಕಡಿಮೆ ದರಕ್ಕೆ ಕೊಂಡು ಮರುಬಳಕೆ ಮಾಡುತ್ತಾರೆ. ಕಾರಣ ಇವರಿಗೆ ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಬಳಸಬೇಕು ಎಂಬ ಅರಿವಿಲ್ಲ. ಹಾಗೆಯೇ ದೊಡ್ಡ ಹೋಟೆಲ್‌ಗಳು ಸಹ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಕಡಿಮೆ ದರಲ್ಲಿ ನೀಡುತ್ತಾರೆ. ಹಾಗೆ ಮಾಡುವ ಬದಲು ಬಳಕೆ ಎಣ್ಣೆಯನ್ನು ಸಂಗ್ರಹಿಸಿ ಆರ್‌ಯುಸಿಒ (ಬಳಸಿದ ಅಡುಗೆ ಎಣ್ಣೆ ಮರುಬಳಕೆ ಮಾಡುವ ಸಂಸ್ಥೆ) ಏಜೆನ್ಸಿಗಳಿಗೆ ನೀಡಬಹುದಾಗಿದೆ. ಇದರಿಂದ ಜನರ ಆರೋಗ್ಯ ಹಾಗೂ ಪರಿಸರ ಎರಡನ್ನೂ ರಕ್ಷಿಸಬಹುದಾಗಿದೆ. ತಾಜಾ ಎಣ್ಣೆಯನ್ನು ಲೀಟರ್‌ಗೆ 125- 140 ರೂ. ಬೆಲೆಗೆ ಖರೀದಿ ಮಾಡಲಾಗುತ್ತದೆ. ಹಾಗೆಯೇ ಈ ಬಳಕೆ ಮಾಡಿದ ಎಣ್ಣೆಯನ್ನು ಆರ್‌ಯುಸಿಒ (ಬಳಸಿದ ಅಡುಗೆ ಎಣ್ಣೆ ಮರುಬಳಕೆ ಮಾಡುವ ಸಂಸ್ಥೆ) ಏಜೆನ್ಸಿಗಳು ಲೀಟರ್‌ಗೆ 65-75 ರೂ. ಕೊಟ್ಟು ಖರೀದಿಸಲಿವೆ. ಹಾಗಾಗಿ ಎಣ್ಣೆ ಮರುಬಳಕೆ ಮಾಡದೆ ಆರೋಗ್ಯಕರ ಆಹಾರ ತಯಾರಿಕೆಗೆ ಆದ್ಯತೆ ನೀಡಿರಿ.