ಜಿಲ್ಲೆ

ಅಗ್ನಿರಹಿತ ಪಾಕ ಸ್ಪರ್ಧೆ ನಾಳೆ

ಪಂಕಜ ಕೆ.ಎಂ.

ಬೆಂಗಳೂರು: ಜಯನಗರ 3ನೇ ಬ್ಲಾಕ್ 9ನೇ ಮುಖ್ಯರಸ್ತೆಯಲ್ಲಿರುವ ತನಿಷ್ಕ್ ಮಳಿಗೆ ಆವರಣದಲ್ಲಿ ಭಾನುವಾರ (ಜು. 28) ಅಗ್ನಿರಹಿತ ಪಾಕ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ಸಂಪೂರ್ಣ ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶವಿದ್ದು, ಪೌಷ್ಟಿಕವಾಗಿರುವ ಆಹಾರವನ್ನು ಆಕರ್ಷಕವಾಗಿ ಪ್ರಸ್ತುತಪಡಿಸಬೇಕು. ಸಾಂಪ್ರದಾಯಿಕ ಅಥವಾ ಆಧುನಿಕವಾದ ಆಹಾರ ತಯಾರಿಸಬಹುದಾದು. ತೀರ್ಪುಗಾರರ ತೀರ್ಮಾನವೇ ಅಂತಿಮ. ಅಡಿಗಾಸ್ ಖ್ಯಾತಿಯ ಪಾಕಶಾಲಾ ನಿರ್ದೇಶಕಿ ವಿನೋದಾ ಅಡಿಗ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೋದಣಿ ಉಚಿತವಾಗಿರಲಿದ್ದು, ಆಸಕ್ತರು ದೂ: 99727 36455 ಸಂಪರ್ಕಿಸಿ.