ಜಿಲ್ಲೆ

ಕೊಲೆಗಾರನಿಗೆ ಜೀವಾವಧಿ ಶಿಕ್ಷೆ

Uttara Kannada - Subash Hegde

ಕಾರವಾರ: ಪುಡಿಗಾಸಿಗಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಅಪರಾಽಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಭರತ ಸಿಂಗ್ ತ್ರಿಲೋಕ ಸಿಂಗ್ ಅಧಿಕಾರಿ ಶಿಕ್ಷೆಗೊಳಗಾದ ಅಪರಾಽ. ಅಪರಾಧಿಯು ಮೃತನ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

2016 ಆಗಸ್ಟ್ 11 ರಂದು ಸಾಯಂಕಾಲ ಕಾನಸೂರಿನಿಂದ ಹಿರೇಕೈಗೆ ಬೈಕ್‌ನಲ್ಲಿ ತೆರಳುತ್ತಿದ್ದ ಶರತ್ ಗಣೇಶ ಆಚಾರಿ ಎಂಬುವವರ ಬಳಿ ಉತ್ತರ ಭಾರತ ಮೂಲದ ದಿಲರಾಜ್ ಮದನಮೋಹನ ಧ್ಯಾನಿ ಹಾಗೂ ಭರತ ಸಿಂಗ್ ತ್ರಿಲೋಕ ಸಿಂಗ್ ಅಧಿಕಾರಿ ಎಂಬ ಇಬ್ಬರು ಡ್ರಾಪ್ ಕೇಳಿದ್ದರು. ಅವರನ್ನು ಕೂರಿಸಿಕೊಂಡು ಹೋಗುವಾಗ ರಸ್ತೆ ನಡುವೆ ಇಬ್ಬರೂ ಶರತ್ ಅವರಿಗೆ ಚಾಕು ಇರಿದು ಅವರನ್ನು ಚರಂಡಿಯಲ್ಲಿ ಎಸೆದಿದ್ದರು. ಅವರ ಬೈಕ್, ಮೊಬೈಲ್ 2500 ರೂ. ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಇದರಲ್ಲಿ 2 ನೇ ಆರೋಪಿ ದಿಲರಾಜ್ ಮದನಮೋಹನ ಧ್ಯಾನಿ ಎಂಬಾತನನ್ನು ಪೊಲೀಸರು ಬಂಧಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆತನಿಗೆ ಈ ಮೊದಲೇ ನ್ಯಾಯಾಲಯ ಶಿಕ್ಷೆ ಘೋಷಿಸಿತ್ತು. 1 ನೇ ಆರೋಪಿ ಭರತ ಸಿಂಗ್ ತ್ರಿಲೋಕ ಸಿಂಗ್ ಅಽಕಾರಿ ಎಂಬಾತನನ್ನು ನಂತರ ಬಂಧಿಸಿ ಆತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯರಾಮ ಡಿ ಗೌಡ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ್ ವಾದ ಮಂಡಿಸಿದ್ದರು.