ಜಿಲ್ಲೆ

ದಾಯಾದಿಯನ್ನು ಕೊಲೆ ಮಾಡಿದ ಸಹೋದರರಿಗೆ ಜೀವಾವಧಿ ಶಿಕ್ಷೆ

Uttara Kannada - Subash Hegde

ಕಾರವಾರ: ಜಮೀನು ಹಂಚಿಕೆ ವಿಚಾರದಲ್ಲಿ ಗಲಾಟೆ ತೆಗೆದು ಸಹೋದರನನ್ನು ರಾಡ್‌ನಿಂದ ಹೊಡೆದು, ಕೊಲೆ ಮಾಡಿದ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 18 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಹೊನ್ನಾವರ ಸಾಲ್ಕೋಡು ತೊಟ್ಟಿಲುಗುಂಡಿಯ ವಿನಾಯಕ ಹೊನ್ನಪ್ಪ ನಾಯ್ಕ, ಚಿದಂಬರ ಹೊನ್ನಪ್ಪ ನಾಯ್ಕ, ಮಂಜುನಾಥ ನಾರಾಯಣ ನಾಯ್ಕ ಶಿಕ್ಷೆಗೊಳಗಾದವರು.

ತಮ್ಮ ದಾಯಾದಿ ಸಹೋದರ ಹನುಮಂತ ನಾಯ್ಕ ಎಂಬುವವರನ್ನು 2022 ರ ನವೆಂಬರ್ 5 ರಂದು ಕೊಲೆ ಮಾಡಿದ್ದರು. ಅಲ್ಲದೇ ಹನುಮಂತ ಅವರ ಮಾವ ಮಾರುತಿ ಗಣಪತಿ ನಾಯ್ಕ ಅವರ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಕೊಲೆಯ ಭೀಕರ ದೃಶ್ಯಾವಳಿಗಳು ಮೊಬೈಲ್‌ನಲ್ಲಿ ಸೆರೆಯಾಗಿ, ಜಾಲತಾಣಗಳಲ್ಲಿ ಹರಿದಾಡಿದ್ದವು.

ವಿನಾಯಕ ನಾಯ್ಕ ಹಾಗೂ ಇತರರು ಮತ್ತು ಹನುಮಂತ ನಾಯ್ಕ ನಡುವೆ ಜಮೀನಿನ ವಿಚಾರವಾಗಿ ಗಲಾಟೆ ಇತ್ತು. ಜಮೀನಿನಲ್ಲಿ ಕೊಯ್ದ ಅಡಕೆ ಚೀಲಗಳನ್ನು ವಿನಾಯಕ ನಾಯ್ಕ ಹಾಗೂ ಇತರರು ಟಾಟಾ ಏಸ್ ವಾಹನದಲ್ಲಿ ಕೊಂಡೊಯ್ಯುವ ವೇಳೆ ಹನುಮಂತ ನಾಯ್ಕ ಅದನ್ನು ತಡೆದಿದ್ದರು. ಇದರಿಂದ ಸಿಟ್ಟಿಗೆದ್ದ ಮೂವರು ಹನುಮಂತ ಹಾಗೂ ಬಿಡಿಸಲು ಬಂದ ಅವರ ಮಾವ ಮಾರುತಿ ನಾಯ್ಕ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹನುಮಂತ ನಾಯ್ಕ ಹೊನ್ನಾವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಬಗ್ಗೆ ಸಾವಿತ್ರಿ ತಿಮ್ಮಪ್ಪ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶ್ರೇಯಾ ತಿಮ್ಮಪ್ಪ ನಾಯ್ಕ ಅವರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ದಿವ್ಯಾ ತಿಮ್ಮಪ್ಪ ನಾಯ್ಕ ಸಾಕ್ಷ÷್ಯ ನುಡಿದಿದ್ದರು. ಎಲ್ಲವನ್ನೂ ಪರಿಗಣಿಸಿದ ನ್ಯಾಯಾಲಯ ಅಪರಾಽಗಳಿಗೆ ಭಾರತೀಯ ದಂಡ ಸಂಹಿತೆ 302, 307, 324, 504, 506 ರಂತೆ ಶಿಕ್ಷೆ ಹಾಗೂ ದಂಡ ವಿಽಸಿದೆ. ದಂಡ ಪಾವತಿಸದೇ ಇದ್ದಲ್ಲಿ ಕಾರಾಗೃಹ ವಾಸ ಸನುಭವಿಸುವಂತೆ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.