ಕನಕಗಿರಿಯ ಪೊಲೀಸ್ ಠಾಣೆಯಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಿಐ ಕೆ.ಜಿ.ಜಗದೀಶ ಮಾತನಾಡಿದರು. 
ಜಿಲ್ಲೆ

ಅಪರಾಧಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ

Kopala - Desk - Eraveni

ಕನಕಗಿರಿ: ಪೋಕ್ಸೋ ಕಾಯ್ದೆಡಿ ಅಪರಾಧವೆಸಗಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ ಎಂದು ಪಿಐ ಕೆ.ಜಿ.ಜಗದೀಶ ಹೇಳಿದರು.

ಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಕ್ಸೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕೈಗೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನಿನ ಪ್ರಕಾರ ಅಪ್ರಾಪ್ತರನ್ನು ಕಣ್ಣೆತ್ತಿ ನೋಡುವುದು ಸಹ ಪೋಕ್ಸೊ ಕಾಯ್ದೆಗೆ ಒಳಪಡುತ್ತಿದ್ದು, ಅನ್ಯಾಯಕ್ಕೊಳಗಾದವರು ಠಾಣೆಗೆ ದೂರು ಸಲ್ಲಿಸಬಹುದು.

ಇಲ್ಲವೇ 112 ಕರೆ ಮಾಡಿ ದೂರು ಸಲ್ಲಿಸಬಹುದು. ನಿಮ್ಮ ಸುತ್ತಲು ನಡೆಯುತ್ತಿರುವ ಅಕ್ರಮ, ಕಾನೂನು ವಿರೋಧಿ ಚಟುವಟಿಕೆಗಳ ವಿರುದ್ಧ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಐಪಿಸಿ, ಸಿಪಿಸಿ ಕಾಯ್ದೆಗಳ ವಿವರಣೆ, ಯಾವ ಕೃತ್ಯಕ್ಕೆ ಕಾಯ್ದೆ ಹಾಕಲಾಗುತ್ತದೆ ಎಂದು ವಿವರಿಸಿದರು. ಮುಖ್ಯ ಪೇದೆ ಸಿದ್ರಾಮಪ್ಪ, ಎಕ್ಸೆಲ್ ಶಾಲೆಯ ಶಿಕ್ಷಕರು ಇದ್ದರು.