ಜಿಲ್ಲೆ

ಮತಾಂತರವಾಗಿದ್ದವರ ಘರ್​ ವಾಪಸಿ; ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಶಿಲುಬೆ ತೆಗೆದಿಟ್ಟು ಕಂಕಣ ಕಟ್ಟಿಕೊಂಡು ವಾಪಸ್

Webdesk - Ravikanth

ಚಿತ್ರದುರ್ಗ: ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ ಎಂದು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದ ಶಾಸಕ ಗೂಳಿಹಟ್ಟಿ ಶೇಖರ್, ಕ್ರೈಸ್ತ ಮತಾಂತರವಾಗಿದ್ದವರನ್ನು ತಮ್ಮ ನೇತೃತ್ವದಲ್ಲಿ ಮರಳಿ ಹಿಂದು ಧರ್ಮಕ್ಕೆ ಕರೆಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬಲ್ಲಾಳ ಸಮುದ್ರ ಗ್ರಾಮದ ಸುಡುಗಾಡು ಸಿದ್ದ ಸಮುದಾಯದವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಅವರೆಲ್ಲರನ್ನೂ ಇಂದು ಹಾಲುರಾಮೇಶ್ವರ ದೇವಾಲಯದಲ್ಲಿ ಘರ್​ ವಾಪಸಿ ಮಾಡಲಾಗಿದೆ.

ಹಾಲುರಾಮೇಶ್ವರ ದೇವಸ್ಥಾನದಲ್ಲಿ ಮೈಮೇಲೆ ನೀರು ಚಿಮುಕಿಸಿಕೊಂಡು ಶಿಲುಬೆ ತೆಗೆದಿಟ್ಟ ಬಳಿಕ ಕಂಕಣ ಕಟ್ಟಿಸಿ ಅವರನ್ನು ಮಾತೃಧರ್ಮಕ್ಕೆ ಸ್ವಾಗತಿಸಿಕೊಳ್ಳಲಾಯಿತು.