ಚಿಕ್ಕಮಗಳೂರು ಹೊರವಲಯದ ಶಾಂತಿನಗರ ಕಲ್ಲುದೊಡ್ಡಿಯ ಶ್ರೀ ಗಣಪತಿ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ಧರ್ಮಪ್ರಸಾರ ವಿಭಾಗದಿಂದ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗೆ ಗೌರವ ಸಮರ್ಪಣೆ ಮಾಡಲಾಯಿತು. ರಾಜು, ಆಟೋಶಿವಣ್ಣ, ಮಣಿಕಂಠ ಮತ್ತಿತರರಿದ್ದರು. 
ಜಿಲ್ಲೆ

ಆಸೆ, ಆಮಿಷಗಳಿಂದ ನಡೆಯುತ್ತಿದೆ ಮತಾಂತರ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಸಣ್ಣ ಸಣ್ಣ ದೌರ್ಬಲ್ಯಗಳನ್ನು ದೊಡ್ಡದಾಗಿ ತೋರಿಸಿ ಆಸೆ, ಆಮಿಷಗಳನ್ನು ಒಡ್ಡಿ ಮತಾಂತರ ಕಾರ್ಯ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸನಾತನಿಗಳು ಸಂಸ್ಕಾರಯುತವಾಗಿ ಜೀವಿಸುವ ಅನಿವಾರ್ಯತೆ ಜಗತ್ತಿಗಿದೆ ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಧರ್ಮಪ್ರಸಾರ ವಿಭಾಗದಿಂದ ನಗರದ ಶಾಂತಿನಗರ ಕಲ್ಲುದೊಡ್ಡಿಯ ಶ್ರೀ ಗಣಪತಿ ದೇವಾಲಯದಲ್ಲಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಮತಾಂತರ ಮುಕ್ತ ಸಮಾಜಕ್ಕೆ ಪ್ರತಿಯೊಬ್ಬರೂ ಪಣತೊಡಬೇಕು ಎಂದು ಕರೆ ನೀಡಿದರು.
ಜಗತ್ತಿನ ಅನೇಕ ಧರ್ಮ ಗುರುಗಳು ಹೇಳಿರುವಂತೆ ಎಲ್ಲಿಯವರೆಗೂ ಸನಾತನ ಧರ್ಮ ಈ ಭೂಮಿಯಲ್ಲಿರುತ್ತದೆಯೋ ಅಲ್ಲಿವರೆಗೆ ಮಾತ್ರ ಈ ಭೂಮಿಗೆ ಮತ್ತು ಮಾನವ ಸಮಾಜಕ್ಕೆ ಭದ್ರತೆ ಇರುತ್ತದೆ. ಸನಾತನ ಸಂಸ್ಕೃತಿ ನಾಶವಾಗಲು ಆರಂಭವಾದಾಗ ಈ ಜಗತ್ತೇ ನಾಶವಾಗುವ ಸಾಧ್ಯತೆ ಹೆಚ್ಚು ಎಂದರು.
ಅನೇಕ ಕಡೆಗಳಲ್ಲಿ ಸನಾತನತೆ ನಾಶ ಹೊಂದಿವೆ. ಆ ಸ್ಥಳಗಳಲ್ಲಿ ಪ್ರಾಣಿಗಳಿಗಿಂತ ಕೀಳಾಗಿ ಮನುಷ್ಯರು ನಡೆದುಕೊಳ್ಳುತ್ತಿದೆ. ಸನಾತನ ಧರ್ಮವನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ. ಮಕ್ಕಳು, ಯುವಕ-ಯುವತಿಯರಿಗೆ ಸೂಕ್ತ ರೀತಿಯ ಸಂಸ್ಕಾರವನ್ನು ಕಲಿಸುವ ಮತ್ತು ಅಭ್ಯಾಸ ಮಾಡಿಸುವಂತಾಗಬೇಕು ಎಂದು ಹೇಳಿದರು.
ನಮ್ಮ ಸಂಸ್ಕೃತಿ ನಮ್ಮ ಧರ್ಮ ಉಳಿದರೆ ಜಗತ್ತೇ ಉಳಿಯಲಿದೆ. ಎಂದಿಗೂ ಆಸೆ-ಆಮಿಷಗಳಿಗೆ ಬಲಿಯಾಗದೇ ಸನಾತನ ಧರ್ಮ ಉಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ರಾಜು, ಆಟೋಶಿವಣ್ಣ, ಮಣಿಕಂಠ ಮತ್ತಿತರರಿದ್ದರು.