ಕಾರವಾರ: ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದ ಗುನಗಿವಾಡದ ಮನೆಯೊಂದಕ್ಕೆ ನುಗ್ಗಿದ ಹಿಂದು ಆಸ್ತಿಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.
ರೆವರೆಂಡ್ ಡಾ.ಪಿ.ಸಾಮ್ರಾಜ್ ಎಂಬುವವರು ಗುನಗಿವಾಡದ ದಿವಾಕರ ಗ್ಯಾರೇಜ್ ಸಮೀಪದ ತಮ್ಮ ಮನೆಯಲ್ಲಿ ಪ್ರಾರ್ಥನಾ ಸ್ಥಳವೊಂದನ್ನು ಪ್ರಾರಂಭಿಸಿದ್ದು, ಅಲ್ಲಿನ ಬರುವವರಿಗೆ ರೋಗ, ಸಂಕಷ್ಟ ಮುಕ್ತಿಗಾಗಿ ಪ್ರಾರ್ಥನೆ ಮಾಡಿಸುತ್ತಿದ್ದರು ಎನ್ನಲಾಗಿದೆ. ಅಂಕೋಲಾ ಕಾರವಾರ ಭಾಗದ ಹಲವರು ಆಗಮಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಕೆಎಚ್‌ಬಿ ಕಾಲನಿಯ ಬಿಜೆಪಿ ಮುಖಂಡ ಗಜಾನನ ಕುಬಡೆ, ಅಮಿತ್ ಕಾಮತ್, ಹಿಂದು ಸಂಘಟನೆಗಳ ಪ್ರಮುಖರಾದ ರತನ್ ದುರ್ಗೇಕರ್, ಬಿ.ಎಸ್.ಪೈ. ಇತರರು ತೆರಳಿ, ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಹರ ಠಾಣೆ ಪೊಲೀಸರು ಮಧ್ಯ ಪ್ರವೇಶಿಸಿ, ದೂರು ನೀಡುವಂತೆ ಸೂಚಿಸಿದ್ದಾರೆ. ಆದರೆ, ಈ ಸಂಬAಧ ಯಾರೂ ದೂರು ನೀಡಲು ಮುಂದಾಗಿಲ್ಲ. ಕಾರಣ ಪ್ರಕರಣ ದಾಖಲಾಗಿಲ್ಲ.