ಹುಬ್ಬಳ್ಳಿ: ಭಾರತ ಎಜುಕೇಶನ್ ಸೊಸೈಟಿಯ ಅದರಗುಂಚಿ ಭಾರತ್ ಕಾನ್ವೆಂಟ್ ಸ್ಕೂಲ್ ನಲ್ಲಿ ಶುಕ್ರವಾರ ವಿಶ್ವ ವಿಜ್ಞಾನ ದಿನ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಮಾಡಿದರು.
ಮುಖ್ಯಾಧ್ಯಾಪಕ ಸಿ.ಎಂ. ಶಿಂಧೆ ಪ್ರಾಸ್ತಾವಿಕ ಮಾತನಾಡಿದರು. ಅಬ್ಬಿಗೇರಿ, ಶರಣು ಬಳಗಾರ, ಭಾಗ್ಯಶ್ರೀ ಕೋಳಿವಾಡ, ಹನಿಷ ಮುಲ್ಲಾ, ಸವಿತಾ ಚಿಕ್ಕನಗೌಡ್ರ, ಭಾರತಿ ಸಿದ್ದಾಪುರ ಉಪಸ್ಥಿತರಿದ್ದರು.
ಸುಭಾಷ್ ಅಂಚಿ ನೇತೃತ್ವ ವಹಿಸಿದ್ದರು. ಶಿಕ್ಷಕಿ ಲಕ್ಷ್ಮಿ ಹಿರೇಮಠ ನಿರೂಪಿಸಿದರು. ಪ್ರೀತಿ ಹಿರೇಗೌಡ್ರ ವಂದಿಸಿದರು.