ಜಿಲ್ಲೆ

ಶ್ರೀರಾಮ ಸೇವಾ ಮಂದಿರಕ್ಕೆ ಕೊಡುಗೆ

Avinash R

ಕೊಕ್ಕಡ: ಕೊಕ್ಕಡದ ಶ್ರೀರಾಮ ಸೇವಾ ಟ್ರಸ್ಟ್ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀರಾಮ ಸೇವಾ ಮಂದಿರಕ್ಕೆ ನಿವೃತ್ತ ಶಿಕ್ಷಕ ದಂಪತಿ ಸುಂದರಿ ಹಾಗೂ ಕುಂಞಪ್ಪ ಗೌಡ ಪೂವಜೆ ಕೊಲ್ಲಾಜೆಪಳಿಕೆ 1 ಲಕ್ಷ ರೂ. ಮೌಲ್ಯದ ಅಡುಗೆ ಪಾತ್ರೆ ಕೊಡುಗೆಯಾಗಿ ನೀಡಿದರು.

ನಿವೃತ್ತ ಶಿಕ್ಷಕ ಗಣೇಶ್ ಐತಾಳ್ ದೊಡ್ಡ ಗ್ಯಾಸ್‌ಸ್ಟವ್, ಸಚಿನ್ ಸಾಲಿಯಾನ್ ವೈನ್ಸ್ ಬಾವಿಗೆ ರಕ್ಷಾ ಕವಚ, ಮೆಸ್ಕಾಂ ಸಿಬ್ಬಂದಿ, ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಸಿಬ್ಬಂದಿ ಊಟದ ತಟ್ಟೆ, ಹಿಂದು ಶಕ್ತಿ ಆಟೋ ಚಾಲಕ-ಮಾಲೀಕರ ಸಂಘ ವತಿಯಿಂದ ಗೋದ್ರೆಜ್ ಕಪಾಟು, ಶ್ರೀನಾಥ್ ಬಡೆಕೈಲು ಪ್ರಕೃತಿ ಇಂಜಿನಿಯರಿಂಗ್ ವರ್ಕ್ಸ್ ಸಿಂಗಲ್ ಬರ್ನರ್ ಸ್ಟವ್, ಹೇಮಂತ್ ಕುಮಾರ್ ಶ್ರೀ ದುರ್ಗಾಪರಮೇಶ್ವರಿ ಫ್ಲವರ್ ಸ್ಟಾಲ್ ಕೊಕ್ಕಡ ಮಿಕ್ಸರ್ ಗ್ರೈಂಡರ್, ಪಾಕತಜ್ಞ ಅಶೋಕ್ ಭಿಡೆ ಗ್ರೈಂಡರ್ ನೀಡಿರುತ್ತಾರೆ. ಇತರ ದಾನಿಗಳು ಕೂಡ ಶ್ರೀರಾಮ ಸೇವಾ ಮಂದಿರಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿದ್ದಾರೆ.

ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಪ್ರಧಾನ ಅರ್ಚಕ ಶ್ರೀ ರಮಾನಂದ ಭಟ್ ಪ್ರಾರ್ಥಿಸಿದ ಬಳಿಕ ದಾನಿಗಳು ನೀಡಿರುವ ವಸ್ತುಗಳನ್ನು ಶ್ರೀ ರಾಮ ಸೇವಾ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.

ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಈಶ್ವರ ಭಟ್ ಹಿತ್ತಿಲು, ಟ್ರಸ್ಟ್ ನಿಕಟಪೂರ್ವ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷ ಬಾಲಕೃಷ್ಣ ನೈಮಿಷ, ಕೋಶಾಧಿಕಾರಿ ಫಣಿರಾಜ್ ಜೈನ್ ಕೊಕ್ಕಡ, ವಿ.ಹಿಂ.ಪ ಅಧ್ಯಕ್ಷ ಪುರುಷೋತ್ತಮ ಕೆ.ಕೊಕ್ಕಡ, ಡಾ.ಗಣೇಶ್ ಪ್ರಸಾದ್, ಡಾ.ಮೋಹನದಾಸ್ ಗೌಡ, ಶಾಂತಪ್ಪ ಮಡಿವಾಳ ಕೊಕ್ಕಡ, ಪುರಂದರ ಕಡೀರ ಹಾಗೂ ಶ್ರೀರಾಮ ಸೇವಾ ಟ್ರಸ್ಟ್ ನ ಮತ್ತು ನಗರ ಭಜನಾ ಸಪ್ತಾಹದ ಪದಾಧಿಕಾರಿಗಳು ಉಪಸ್ಥಿತರಿದ್ದರು.