ಹಿಂದು ವಿದ್ಯಾದಾಯಿನಿ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ತಂಡ ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ 1.25 ಲಕ್ಷ ರೂ ಮೌಲ್ಯದ 6 ಸಿರಾಮಿಕ್ ತರಗತಿ ಬೋರ್ಡ್‌ಗಳನ್ನು ಸಮರ್ಪಿಸಲಾಯಿತು. 
ಜಿಲ್ಲೆ

ಹಿರಿಯ ವಿದ್ಯಾರ್ಥಿಗಳಿಂದ ಶಾಲೆಗೆ ಕೊಡುಗೆ

Mangaluru - Shravan Kumar Nala

ಮಂಗಳೂರು: ಹಿಂದು ವಿದ್ಯಾದಾಯಿನಿ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆಯ 1984-85ನೇ ಎಸ್‌ಎಸ್‌ಎಲ್ಸಿ ಬ್ಯಾಚ್‌ನ 10-ಎ ತರಗತಿಯ ಪ್ರಕಾಶ್ ರಾವ್, ರಾಮಣ್ಣ, ಸತೀಶ್, ಮನೋಹರ್, ಶೋಧನ್, ರಾಘವೇಂದ್ರ ರಾವ್, ಶ್ರೀನಿಧಿ, ಭಾರತಿ ಮೊದಲಾದ ಹಳೇ ವಿದ್ಯಾರ್ಥಿಗಳ ತಂಡ ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ 1.25 ಲಕ್ಷ ರೂ ಮೌಲ್ಯದ 6 ಸಿರಾಮಿಕ್ ತರಗತಿ ಬೋರ್ಡ್‌ಗಳನ್ನು ಸಮರ್ಪಿಸಲಾಯಿತು.

ಶಾಲಾ ಸಂಚಾಲಕ ಸುಧಾಕರ್ ರಾವ್ ಪೇಜಾವರ, ಮುಖ್ಯಶಿಕ್ಷಕ ಬಾಲಚಂದ್ರ ಕೆ., ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಜಯಾ ಉಪಸ್ಥಿತರಿದ್ದರು.