ಹೆಬ್ರಿ: ಸರ್ಕಾರಿ ಶಾಲೆ ಕಲಿಕಾ ಗುಣಮಟ್ಟ ಹೆಚ್ಚಿಸಲು 10 ಲಕ್ಷ ರೂ. ಮೌಲ್ಯದ ದೊಡ್ಡ ಕೊಡುಗೆ ಸಂಸ್ಥೆಯವರು ನೀಡಿರುವುದು ಶ್ಲಾಘನೀಯ. ಸರ್ಕಾರಿ ಶಾಲೆ ಮಕ್ಕಳು ಕೂಡ ಉತ್ತಮವಾಗಿ ಕಲಿಯಬೇಕು ಎಂಬ ಉದ್ದೇಶದಿಂದ ಈ ಶಾಲೆ ಮಾದರಿಯನ್ನಾಗಿ ಮಾಡುವ ಅಭಿಲಾಷೆ ಇದೆ ಎಂದು ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ಹೆಬ್ರಿ ಸತೀಶ್ ಪೈ ಹೇಳಿದರು.
ಹೆಬ್ರಿ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲ ಪೇಮೆಂಟ್ ಮತ್ತು ಐಡೆಂಟಿಟಿ ಸೊಲ್ಯೂಷನ್ ಸಂಸ್ಥೆಯವರು ಕೊಡ ಮಾಡಿದ ಏಳು ಇಂಟರಾಕ್ಟಿವ್ ಸ್ಮಾರ್ಟ್ ಪ್ಯಾನಲ್‌ಗಳು ಹಾಗೂ ಕುಡಿಯುವ ನೀರಿನ ಘಟಕ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಂಪಿಐ ಮಣಿಪಾಲ ಸಂಸ್ಥೆ ಮ್ಯಾನೇಜರ್ ರೆನಾಲ್ಡ್ ಡಿಸೋಜ ಉದ್ಘಾಟಿಸಿದರು. ಎಸ್‌ಡಿಎಂ.ಸಿ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಬಿಕ್ಸ್ ಉಡುಪಿ ಸಂಸ್ಥೆ ರೀಜನಲ್ ಮ್ಯಾನೇಜರ್ ಅಮರೇಶ್, ಎಬಿಕ್ಸ್ ಉಡುಪಿ ಸಂಸ್ಥೆ ಸಿಸ್ಟಮ್ ಇಂಜಿನಿಯರ್ ಪ್ರಮೋದ್, ಮುಖ್ಯ ಶರತ್ ಶೆಟ್ಟಿ, ಸಿಎ ಹರಿಪ್ರಸಾದ್ ನಾಯಕ್, ಶಿಕ್ಷಕರು ವಿದ್ಯಾರ್ಥಿಗಳಿದ್ದರು.