ಗುಳೇದಗುಡ್ಡ: ಸ್ಥಳೀಯ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲೆ ವಿಭಾಗದ ನಿವೃತ್ತ ಶಿಕ್ಷಕಿ ಚಂದ್ರಕ್ಕ ಎಚ್ಚರಪ್ಪ ಹುಣಸಿಮರದ ತಾವು ಸೇವೆ ಸಲ್ಲಿಸಿದ ಶಾಲೆಗೆ ಒಂದು ಲಕ್ಷ ರೂ.ದೇಣಿಗೆ ನೀಡಿದರು.
ಪ್ರಾಚಾರ್ಯ ಎಂ.ಪಿ.ಮಾಗಿ ಮಾತನಾಡಿ, ಇದೇ ಶಾಲೆಯಲ್ಲಿ ಓದಿ, ಈ ಶಾಲೆಯಲ್ಲಿಯೇ ಶಿಕ್ಷಕರಾಗಿ ನಿವೃತ್ತರಾದ ಚಂದ್ರಕ್ಕ ಹುಣಸಿಮರದ ಅವರು ತಾವು ಕಲಿತ, ಕಲಿಸಿದ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದ್ದು ಸ್ಮರಣೀಯ. ಈ ದತ್ತಿ ಹಣದ ಬಡ್ಡಿ ಹಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ದಾನದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಶಿಕ್ಷಕಿ ಚಂದ್ರಕ್ಕ ಅವರ ಕಾರ್ಯ ಶ್ಲಾಘನೀಯ ಎಂದರು.
ಗಣೇಶ ಹುಣಸಿಮರದ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀಕಾಂತ ಧಾರವಾಡ, ಕಳಕಪ್ಪ ಹಿರೇಹಾಳ, ಸಿ.ಎಂ.ಕುರಬರ, ಸಂತೋಷ ಪಟ್ಟಣಶೆಟ್ಟಿ, ಎಲ್.ಎಸ್.ಪತ್ತಾರ, ವೈ.ಜಿ.ತಳವಾರ, ಜಿ.ಆರ್.ಮೂಲಂಗಿ, ಎಲ್.ಐ.ಅಂಗಡಿ, ಎಸ್.ಎಂ.ಬೇಪಘರ, ಎಸ್.ಎಸ್. ಬಿರಾದಾರ, ಎಸ್.ಎನ್.ದೇವಗಿರಕರ, ಎಂ.ಎಂ.ಜನಾಲಿ, ದೇವರಾಜ ಅಡ್ಡಿ, ರಮೇಶ ಬಳ್ಳಾ, ಶಿಲ್ಪಾ ದಳವಾಯಿ, ಸಿ.ಎಸ್.ಹಲಗಲಿ ಮತ್ತಿತರರು ಇದ್ದರು.
.