ಮದ್ದೂರು ತಾಲೂಕಿನ ಬೆಳತೂರು ಗ್ರಾಮದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಕೆ.ಎಸ್ ಪುಟ್ಟಣ್ಣಯ್ಯ ವರಿಗೆ ಗೌರವ ಸಮರ್ಪಣೆ ಹಾಗೂ ಗ್ರಾಮ ಘಟಕಕ್ಕೆ ಚಾಲನೆ ನೀಡಲಾಯಿತು. ಎನ್.ಪ್ರಸನ್ನಗೌಡ, ಕೆಂಪುಗೌಡ, ರಾಮಕೃಷ್ಣ, ಲಿಂಗಪ್ಪಾಜಿ, ವಿನೋದ್‌ಬಾಬು, ರವಿಕುಮಾರ್ ಇದ್ದರು. 
ಜಿಲ್ಲೆ

ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಕೊಡುಗೆ ಅನನ್ಯ

ನಾಗೇಶ ಎಸ್

ಮದ್ದೂರು: ರೈತಪರ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಅವರು ರೈತಸಂಘಕ್ಕೆ ನೀಡಿರುವ ಕೊಡುಗೆಗಳು ಅನನ್ಯ ಎಂದು ರೈತ ಸಂಘದ ರಾಜ್ಯ ಸಂಚಾಲಕ ಪ್ರಸನ್ನ ಎನ್.ಗೌಡ ಬಣ್ಣಿಸಿದರು.

ತಾಲೂಕಿನ ಬೆಳತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಗೌರವ ಸಮರ್ಪಣೆ ಹಾಗೂ ಗ್ರಾಮ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಇಬ್ಬರು ಮಹಾನ್ ವ್ಯಕ್ತಿಗಳು ರೈತರಿಗೆ ಧನಿಯಾಗಿ, ಶಕ್ತಿ, ಸ್ಫೂರ್ತಿಯ ಸೆಲೆಯಾಗಿ ನಿರಂತರವಾರ ಸರ್ಕಾರ ವಿರುದ್ಧ ಹೋರಾಟ ಮಾಡಿ ನ್ಯಾಯಕೊಡಿಸುವ ಮೂಲಕ ರೈತಸಂಘಕ್ಕೆ ಜೀವ ತುಂಬಿದವರು. ಪ್ರತಿ ಗ್ರಾಮಗಳಲ್ಲಿಯೂ ರೈತಸಂಘದ ಘಟಕಗಳನ್ನು ಆರಂಭಿಸುವ ಮೂಲಕ ಪ್ರೊ.ನಂಜುಂಡಸ್ವಾಮಿ ಹಾಗೂ ಪುಟ್ಟಣ್ಣಯ್ಯ ಅವರ ಕನಸನ್ನು ಸಾಕಾರಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ ಮಾತನಾಡಿ, ತ್ಯಾಗ, ಬಲಿದಾನಗಳಿಂದ ಕಟ್ಟಿರುವ ರೈತ ಸಂಘಟನೆಯನ್ನು ಸೇವಾಪರತೆಯಿಂದ ಬೆಳೆಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಹಲವು ಯುವಕರು, ಹಿರಿಯರು ರೈತ ಸಂಘಕ್ಕೆ ಸೇರ್ಪಡೆಗೊಂಡರು.

ತಾಲೂಕು ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಮುಖಂಡರಾದ ಯದುಶೈಲಸಂಪತ್, ವಿನೋದ್ ಬಾಬು, ರವಿಕುಮಾರ್, ವರದರಾಜು, ಸಿದ್ದೇಗೌಡ, ಪುಟ್ಟಸ್ವಾಮಿ, ದಯಾನಂದ್, ಪ್ರಸನ್ನಕುಮಾರ್, ಖ್ಛ್ಟಜೀನಿವಾಸ್, ಮಾಯಿಗಯ್ಯ, ಪುನೀತ್, ನಾಗೇಶ್ ಇದ್ದರು.