ಎನ್.ಆರ್.ಪುರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸುಧಾಕರ್.ಎಸ್.ಶೆಟ್ಟಿ ಪಕ್ಷದ ಅಭ್ಯರ್ಥಿಕರಪತ್ರಗಳನ್ನು ಪ್ರದರ್ಶಿಸಿದರು. ಚಂದ್ರಶೇಖರ್, ಶಿವದಾಸ್, ಸುಬಾನ್, ಎಂ.ಓ.ಜೋಯಿ, ಇ.ಸಿ.ಸೇವಿಯಾರ್ ಇದ್ದರು. 
ಜಿಲ್ಲೆ

ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿ

ಎನ್.ಆರ್.ಪುರ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಎಲ್.ಬೋಜೇಗೌಡ ಹಾಗೂ ಬಿಜೆಪಿಯ ಡಾ.ಧನಂಜಯ ಸರ್ಜಿ ಅವರ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಕೆಲಸ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.
ಮಂಗಳವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ತಾಲೂಕಿನ ಎಲ್ಲಾ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಬೇಕು. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಜೆಡಿಎಸ್ ಯುವಕರು ಹೆಚ್ಚು ಕೆಲಸ ಮಾಡಬೇಕು ಎಂದರು.
ಪ್ರತಿ ಬೂತ್ ಹಾಗೂ ಗ್ರಾಪಂ ಮಟ್ಟದಲ್ಲೂ ಕಾರ್ಯಕರ್ತರು ಕೆಲಸ ಮಾಡಬೇಕು. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಅವರ ಧ್ವನಿಯಾಗಿ ಕೆಲಸ ಮಾಡಲು ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮವಹಿಸಬೇಕು ಎಂದು ಕರೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೆ.ಎನ್.ಶಿವದಾಸ್, ಸುಬಾನ್, ಎಂ.ಓ.ಜೋಯಿ, ಬಿ.ಟಿ.ರವಿ, ಇ.ಸಿ.ಸೇವಿಯಾರ್, ಉಪೇಂದ್ರ ಗೌಡ, ಮಡಬೂರು ಸತೀಶ್, ಹೂವಣ್ಣ ವರ್ಕಾಟೆ, ಸಿದ್ದನ ಕೊಡಿಗೆ ಮನು, ಮನೋಹರ ನಾಯ್ಕ, ಅಳೇಹಳ್ಳಿಕಟ್ಟೇ ಗೌಡ, ಶಿವಣ್ಣ ನಾಯ್ಕ, ಸುಧೀರ್, ಗೋವಿಂದ, ಸಂಜಯ, ಪಿಕಪ್ ಚಂದ್ರು, ಮುಶ್ರಪ್, ಕೊಪ್ಪ ನವೀನ್ ಮತ್ತಿತರರು ಇದ್ದರು.