ತಿಕೋಟಾ ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಶಿಕ್ಷಕರ ಸಭೆಯಲ್ಲಿ ಎಸ್​.ಬಿ. ಬಿರಾದಾರ ಮಾತನಾಡಿದರು. ಸಿದ್ರಾಮಯ್ಯ ಲಕ್ಕುಂಡಿಮಠ, ಜ್ಯೋತಿ ಕೊಣ್ಣೂರ, ವೆಂಕಟೇಶ ಕಪಟಕರ ಇತರರಿದ್ದಾರೆ. 
ಜಿಲ್ಲೆ

ಸಮ್ಮೇಳನ ಯಶಸ್ಸಿಗೆ ಸಹಕಾರ ನೀಡಿ

ವಿಜಯಪುರ: ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಶಿಕ್ಷಕರ ಸಹಕಾರ ಅತ್ಯವಶ್ಯ. ಈಗಾಗಲೇ, ೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲಮಠ ಸೇರಿ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕೈಜೋಡಿಸಿದ್ದಾರೆ ಎಂದು ತಿಕೋಟಾ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಅಧಿಕಾರಿ ಎಸ್​.ಬಿ. ಬಿರಾದಾರ ಹೇಳಿದರು.

ತಿಕೋಟಾದ ವಿರಕ್ತಮಠದಲ್ಲಿ ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಶಿಕ್ಷಕರು ತನು, ಮನ, ಧನದಿಂದ ಸಹಕಾರ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ನೂತನ ತಿಕೋಟಾ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ವಾಡೆಯಲ್ಲಿ ಅರ್ಥಪೂರ್ಣವಾಗಿ ಸಂಟಿಸೋಣ. ತಾಲೂಕಿನ ಎಲ್ಲರೂ ಭಾಗವಹಿಸಿ ಕನ್ನಡಾಂಬೆಯ ಸೇವೆ ಮಾಡೋಣ. ಮಾ. 23 ರಂದು ಜರುಗುವ ಸಮ್ಮೇಳನ ಅತ್ಯಂತ ಶಿಸ್ತು ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಸಹಕರಿಸುವಂತೆ ವಿನಂತಿಸಿದರು.

ಎಂ.ಎಂ. ಜೇವೂರ, ಜಿ.ಜಿ. ದೊಡ್ಡಿಹಾಳ, ಜ್ಯೋತಿ ಕೊಣ್ಣೂರ, ವೆಂಕಟೇಶ ಕಪಟಕರ, ಅನೀಲ ಕೋಟ್ಯಾಳ, ಆರ್​.ಕೆ ಬಿಸನಾಳ, ಗಣಪತಿ ಗಳವೆ, ಎಸ್​.ಎಸ್​. ಸೋಲಾಪೂರ, ಎಫ್​.ಎಸ್​. ಗರಡಿಮನಿ, ಸುರೇಶ ಚಾವಲರ, ಜಿ.ಎಸ್​. ಲಕ್ಕುಂಡಿಮಠ, ಎ.ಬಿ. ಬೋಸಲೆ, ಡಿ.ಬಿ. ಪಾಂಡೆಗಾವಿ, ಎ.ಜೆ. ಬೋಸಲೆ. ಎಸ್​.ಎನ್​. ತಡಲಗಿ, ಹಣಮಂತ ಮೊಹಿತೆ, ಶರಣಮ್ಮು ಹಾದಿಮನಿ ಮತ್ತಿತರರಿದ್ದರು.