ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಯುಕೋ ಕ್ಲಬ್ ಹಾಗೂ ವನಸಿರಿ ಫೌಂಡೇಷನ್ ವತಿಯಿಂದ ಶುಕ್ರವಾರ ಪಕ್ಷಿಗಳಿಗೆ ನೀರಿನ ಅರವಟಿಗೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮುಖ್ಯಶಿಕ್ಷಕಿ ರುಬೀನಾ ತಸ್ಲಿಮಾ, ಸಿದ್ದನಗೌಡ ಗೋನವಾರ, ಶಿಕ್ಷಕಿಯರಾದ ಎಸ್.ಎಚ್.ಪವಿತ್ರಾ, ಅನುಷಾ ಬೇಗಂ ಇತರರಿದ್ದರು. 
ಜಿಲ್ಲೆ

ಪರಿಸರ ಸಂರಕ್ಷಣೆಗೆ ಸಹಕರಿಸಿ

ಸಿಂಧನೂರು: ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಪುಣ್ಯದ ಕೆಲಸವಾಗಿದೆ ಎಂದು ಮುಖ್ಯಶಿಕ್ಷಕಿ ರುಬೀನಾ ತಸ್ಲಿಮಾ ಹೇಳಿದರು.

ತಾಲೂಕಿನ ಜವಳಗೇರಾ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಯುಕೋ ಕ್ಲಬ್ ಹಾಗೂ ವನಸಿರಿ ಫೌಂಡೇಷನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷಿಗಳಿಗೆ ನೀರಿನ ಅರವಟಿಗೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ವನಸಿರಿ ಫೌಂಡೇಷನ್ ಕೂಡ ಇಂಥ ಕೆಲಸಕ್ಕೆ ಕೈಜೋಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ನಿಂತಿದೆ ಎಂದರು.

ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪುರ ಮಾತನಾಡಿ, ಬೇಸಿಗೆಯಲ್ಲಿ ವನಸಿರಿ ಫೌಂಡೇಷನ್‌ದಿಂದ ಸಾವಿರಾರು ಸಂಖ್ಯೆಯಲ್ಲಿ ಅರವಟಿಗೆ ಕಟ್ಟುವ ಕೆಲಸ ಮಾಡಲಾಗುವುದು ಎಂದರು.