ಬಾಕಿ ಬಿಲ್ ಪಾವತಿ ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್ಸಿ,ಎಸ್ಟಿ ಗುತ್ತಿಗೆದಾರರು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡಸಿದರು. ಗುತ್ತಿಗೆದಾರರಾದ ಹನುಮೇಶ ಕಡೆಮನಿ, ರಾಮಣ್ಣ ಚೌಡ್ಕಿ, ಯಲ್ಲಪ್ಪ ಹಿರೇಮನಿ, ಸಿದ್ದು ಮಣ್ಣಿನವರ, ಪರಶುರಾಮ ಸಕ್ರಣ್ಣನವರ, ಯಂಕಪ್ಪ ಹೊಸಳ್ಳಿ, ಮರಿಸ್ವಾಮಿ, ಭೀಮಣ್ಣ ನಡುಲಮನಿ ಇದ್ದರು. 
ಜಿಲ್ಲೆ

ಬಿಲ್ ಪಾವತಿಸುವಂತೆ ಗುತ್ತಿಗೆದಾರರ ಆಗ್ರಹ

Kopala - Raveendra V K

ಕೊಪ್ಪಳ:ಹೊಸ ಕಾಮಗಾರಿ ನೀಡುವುದು ಸೇರಿ ಇತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಸ್ಸಿ-ಎಸ್ಟಿ ಸಿವಿಲ್ ಗುತ್ತಿಗೆದಾರರು ಗುರುವಾರ ನಗರದ ಲೋಕೋಪಯೋಗಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಹೊಸದಾಗಿ ಕಾಮಗಾರಿ ನೀಡುತ್ತಿಲ್ಲ. ಹಿಂದೆ ನಡೆಸಿದ ಕಾಮಗಾರಿಗಳಿಗೆ ಸರಿಯಾಗಿ ಬಿಲ್ ಮಾಡುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ.

ಸರ್ಕಾರವೂ ಎಸ್ಸಿ, ಎಸ್ಟಿ ಗುತ್ತಿಗೆದಾರರನ್ನು ಕಡೆಗಣಿಸುತ್ತಿದೆ. ಹೊಸ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸುತ್ತಿಲ್ಲ. ಈಗಾಗಲೇ ಟೆಂಡರ್ ಕರೆದ ಕಾಮಗಾರಿಗಳ ಆರಂಭಕ್ಕೆ ಅವಕಾಶ ನೀಡುತ್ತಿಲ್ಲ. ಮಾಡಿದ ಕಾಮಗಾರಿಗೂ ಸರಿಯಾಗಿ ಬಿಲ್ ಮಾಡುತ್ತಿಲ್ಲವೆಂದು ಆರೋಪಿಸಿದರು.

ಹೊರಗೆ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದೇವೆ. ಸಕಾಲಕ್ಕೆ ಬಿಲ್ ಆಗದಿದ್ದಲ್ಲಿ ನಾವು ಬೀದಿಗೆ ಬರಬೇಕಾಗುತ್ತದೆ. ನಿಯಮಾನುಸಾರ ನಮಗೆ ಕಾಮಗಾರಿ ನೀಡಬೇಕು.

ಬಾಕಿ ಬಿಲ್ ಬಿಡುಗಡೆ ಮಾಡಬೇಕು. ಹೊಸ ಕಾಮಗಾರಿಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಗುತ್ತಿಗೆದಾರರಾದ ಹನುಮೇಶ ಕಡೆಮನಿ, ರಾಮಣ್ಣ ಚೌಡ್ಕಿ, ಯಲ್ಲಪ್ಪ ಹಿರೇಮನಿ, ಸಿದ್ದು ಮಣ್ಣಿನವರ, ಪರಶುರಾಮ ಸಕ್ರಣ್ಣನವರ,

ಯಂಕಪ್ಪ ಹೊಸಳ್ಳಿ, ಮರಿಸ್ವಾಮಿ, ಭೀಮಣ್ಣ ನಡುಲಮನಿ ಇತರರಿದ್ದರು.