ಜಿಲ್ಲೆ

ಗುತ್ತಿಗೆದಾರರಿಗೆ ಮೊಬೈಲ್ ಅ್ಯಪ್ ಆಧಾರಿತ ತರಬೇತಿ

Koppal

ಯಲಬುರ್ಗಾ: ಮೊಬೈಲ್ ಅ್ಯಪ್ ಆಧಾರಿತ ತಂತ್ರಜ್ಞಾನದಿಂದ ಸಾರ್ವಜನಿರಿಗೆ ಸಮರ್ಪಕ ಕುಡಿವ ನೀರು ಪೂರೈಕೆ ಮತ್ತು ಪಾರದರ್ಶಕ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.

ಪಟ್ಟಣದ ತಾಪಂ ಕಚೇರಿ ಸಭಾಭವನದಲ್ಲಿ ಟ್ಯಾಂಕರ್ ಮೂಲಕ ಬೇಸಿಗೆಯಲ್ಲಿ ನೀರು ಸರಬರಾಜು ಮಾಡುವ ಗುತ್ತಿಗೆದಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮೊಬೈಲ್ ಅ್ಯಪ್ ಆಧಾರಿತ ತರಬೇತಿಯಲ್ಲಿ ಮಾತನಾಡಿದರು. ಮುಂಬರುವ ಬೇಸಿಗೆಯಲ್ಲಿ ಕುಡಿವ ನೀರು ಸರಬರಾಜು ಮಾಡಲು, ರಾಜ್ಯಾದ್ಯಂತ ಮೊಬೈಲ್ ಅ್ಯಪ್ ಆಧಾರಿತ ಪಾರದರ್ಶಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಸರ್ಕಾರ ಇದನ್ನು ಜಾರಿಗೊಳಿಸಿದೆ. ವಿವಿಧ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡುವ ಗುತ್ತಿಗೆದಾರರು ಈ ಅ್ಯಪನ್ನು ಕಡ್ಡಾಯ ಅಳವಡಿಸಿಕೊಳ್ಳಬೇಕು. ಕೊಳವೆ ಬಾವಿಯಿಂದ ನೀರು ಸಂಗ್ರಹಿಸಿ, ಟ್ಯಾಂಕರ್‌ನಿಂದ ಸರಬರಾಜು ಮಾಡುವಾಗ ಆಪ್‌ನಲ್ಲಿ ನಮೂದಿಸಬೇಕು. ಈ ವ್ಯವಸ್ಥೆಯನ್ನು ಎಲ್ಲರೂ ಬಳಸಬೇಕು ಎಂದರು. ಮಾಸ್ಟರ್ ಟ್ರೇನರ್ ಆರ್.ಎಫ್.ಅಂಜುಮ್ ಮೊಬೈಲ್ ಆಪ್ ಆಧಾರಿತ ತರಬೇತಿ ನೀಡಿದರು.

ತಾಪಂ ಇಒ ಡಾ.ಜಯರಾಮ ಚವಾಣ, ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಪಪಂ ಸಿಒ ಮಹೇಶ ನಿಡಶೇಸಿ, ತಾಪಂ ಸಿಬ್ಬಂದಿ ಶಿವಪುತ್ರಪ್ಪ ತಿಪ್ಪನಾಳ, ಪಪಂ ಇಂಜಿನಿಯರ್ ಉಮೇಶ ಬೇಲಿ ಹಾಗೂ ಗುತ್ತಿಗೆದಾರರು, ಟ್ರ್ಯಾಕ್ಟರ್ ಚಾಲಕರು ಇದ್ದರು.