ಜಿಲ್ಲೆ

ಮೀಸಲಾತಿ ಸಮರ್ಪಕವಾಗಿ ಜಾರಿಯಾಗಲಿ: ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಪಾಪಯ್ಯ ಒತ್ತಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯಸರ್ಕಾರ ಕಾಮಗಾರಿ ಮೊತ್ತವನ್ನು ಒಂದು ಕೋಟಿ ರೂಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ. ಆದರೆ ಈ ಮೀಸಲಾತಿ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಪಾಪಯ್ಯ ಒತ್ತಾಯಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಗುತ್ತಿಗೆದಾರರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುತ್ತಿಗೆ ಎಂಬುದು ಕೆಲವೇ ಕೆಲವು ವರ್ಗಕ್ಕೆ ಉಪಯೋಗವಾಗುತ್ತಿದೆ. ಆದರೆ ಇದು ಸಣ್ಣ ಸಮಾಜಗಳಿಗೂ ತಲುಪುವಂತಾಗಬೇಕು. ಸರಿಯಾದ ರೀತಿಯಲ್ಲಿ ಕಾಮಗಾರಿಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ. ಬದಲಿಗೆ ಆರ್ಥಿಕವಾಗಿ ಸಬಲರಾಗಿರುವವರಿಗೆ ನೀಡುತ್ತಿದ್ದಾರೆ. ಪರಿಣಾಮ ನಮ್ಮ ಎಡಗೈ ಸಮಾಜ ಹಿಂದುಳಿಯುತ್ತಿದೆ. ಸಣ್ಣ ಸಮುದಾಯಗಳನ್ನು ಗಮನಿಸಿ ಕಾಮಗಾರಿಯನ್ನು ನೀಡುವಂತೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಗುತ್ತಿಗೆದಾರರಾದ ಲೋಕೇಶ್, ನರಸಿಂಹಮೂರ್ತಿ, ಚಂದ್ರು, ರವೀಶ್, ವೆಂಕಟೇಶ್, ಸಿ.ಸ್ವಾಮಿ, ಭೈರವ ಶಂಕರ್, ಬಸವರಾಜು, ಪುಟ್ಟಸ್ವಾಮಿ ಇತರರಿದ್ದರು.