ಜಿಲ್ಲೆ

ಸಂತೋಷ್ ಪಾಟೀಲ್ ಕುಟುಂಬಕ್ಕೆ ನೆರವು ನೀಡಿ

Raichur

ಗುತ್ತಿಗೆದಾರರ ಸಂಘದ ತಾಲೂಕು ಘಟಕ ಆಗ್ರಹ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರಗೆ ಮನವಿ

ಸಿಂಧನೂರು: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸರ್ಕಾರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗಬೇಕು. ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕೆಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರಗೆ ಗುತ್ತಿಗೆದಾರರ ಸಂಘದ ತಾಲೂಕು ಘಟಕ ಮಂಗಳವಾರ ಮನವಿ ಸಲ್ಲಿಸಿತು.

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್‌ಗೆ ಆಗಿರುವ ಅನ್ಯಾಯ ಖಂಡನೀಯ. ಪರ್ಸೆಂಟೇಜ್ ವ್ಯವಸ್ಥೆಯಿಂದ ರಾಜ್ಯದ ಗುತ್ತಿಗೆದಾರರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯಲು ಅವಕಾಶ ಕೊಡಬಾರದು. ಪಸೆರ್ಂಟೇಜ್ ಭೂತಕ್ಕೆ ಇತೀಶ್ರೀ ಹಾಕಬೇಕು. ಸಂತೋಷ ಪಾಟೀಲ್ ನಿರ್ವಹಿಸಿದ ಎಲ್ಲ ಕಾಮಗಾರಿಗಳ ಬಿಲ್ ಪಾವತಿಸಬೇಕು. ಸಾವಿನ ತನಿಖೆ ತುರ್ತು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಗುತ್ತಿಗೆದಾರ ಸಂಘದ ತಾಲೂಕು ಅಧ್ಯಕ್ಷ ಜಿ.ಜೆ.ಅಶೋಕಕುಮಾರ, ಗೌರವಾಧ್ಯಕ್ಷ ಹೊಸಳ್ಳಿ ದೊಡ್ಡಬಸವನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮಹೇಶ ಮಲ್ಕಪ್ ರಡ್ಡಿ, ಕಾರ್ಯದರ್ಶಿ ಅಕ್ತರ್‌ಪಾಷಾ, ಸದಸ್ಯರಾದ ಪಂಪಯ್ಯಸ್ವಾಮಿ ರಾವಿಹಾಳ, ಶಬ್ಬೀರ್ ಮಹ್ಮದ್, ಸುಮಿತ್ ತಡಕಲ್, ಅಲ್ಲಮಪ್ರಭು ಪೂಜಾರಿ, ಬಾಷಾ, ಹನುಮಂತಪ್ಪ ಪನ್ನೂರು, ಅಮರೇಶ ಮಿಟ್ಟಿಮನಿ, ಪದ್ಮಾ ನಾಯ್ಡು, ಹಮೀದ್ ಖಾನ, ಹುಸೇನಪ್ಪ, ಯೂನಸ್ ಪಾಷಾ ಇದ್ದರು.