ಹುಬ್ಬಳ್ಳಿ: ಹುಬ್ಬಳ್ಳಿ ನೈಟ್ಸ್ ಲೇಡಿಸ್ ಸರ್ಕಲ್ 143 ಸಹಯೋಗದಲ್ಲಿ ಇಲ್ಲಿಯ ಶ್ರೀ ವ್ನಿೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ನಿಭಾಯಿಸುವ ಹಾಗೂ ಜೀವನೋಪಾಯ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಸಮಾಲೋಚಕಿ ನಂದಾ ಆನೆಗುಂದಿ ಮಾತನಾಡಿ, ಯಾವುದೇ ಪರೀಕ್ಷೆ ಇರಲಿ ಮಕ್ಕಳು ಭಯಭೀತರಾಗಬಾರದು. ಪಠ್ಯಕ್ಕೆ ಅನುಗುಣವಾಗಿ ನೋಟ್ಸ್, ಅಧ್ಯಯನ ನಿರಂತರವಾಗಿದ್ದರೆ ಯಶಸ್ಸು ಸುಲಭ ಎಂದರು.
ಶಾಲೆ ಗೌರವಾಧ್ಯಕ್ಷೆ ದಾಕ್ಷಾಯಿಣಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು.
ಸರ್ಕಲ್ ಸಂಚಾಲಕಿ ಸುಮಿತ್ರಾ ಅಳವಂಡಿ, ಪೂನಮ್ ಭುಟಾಡೆ, ನಿಖಿತಾ ಚವ್ಹಾಣ, ಪ್ರಾಂಶುಪಾಲೆ ಪ್ರಶೀಲಾ ಕೊಠಾರಕರ ಇತರರು ಭಾಗವಹಿಸಿದ್ದರು.