ಜಿಲ್ಲೆ

ನಿರಂತರ ಓದಿನಿಂದ ಕಲಿಕಾಮಟ್ಟ ಸುಧಾರಣೆ

ವೀರೇಶ ಸೌದ್ರಿ

ರೋಣ: ಪತ್ರಿಕೆ ಓದುವುದರಿಂದ ಮಕ್ಕಳ ಕಲಿಕಾಮಟ್ಟ ಸುಧಾರಣೆಯಾಗುತ್ತದೆ. ವಿಜಯವಾಣಿಯ ವಿದ್ಯಾರ್ಥಿ ಮಿತ್ರ ಪತ್ರಿಕೆಯು ಎಸ್ಸೆಸ್ಸೆಲ್ಸಿ ಮಕ್ಕಳ ಪಾಠದ ಜತೆಗೆ ಹಲವು ಉಪಯುಕ್ತ ಮಾಹಿತಿ ಒಳಗೊಂಡಿದೆ ಎಂದು ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಹೇಳಿದರು.

ತಾಲೂಕಿನ ಮುಗಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಯೋಜನೆಯ ಸದ್ಬಳಕೆ ಮಾಡಿಕೊಂಡು ಶಾಲೆ ಹಾಗೂ ಊರಿನ ಕೀರ್ತಿ ಹೆಚ್ಚಿಸಬೇಕು ಎಂದರು.

ಕೊತಬಾಳ ಸಿಆರ್‌ಪಿ ಎಸ್.ಎಚ್. ಪರಸನ್ನವರ ಮಾತನಾಡಿ, ಕಲಿಕೆ ಎಂಬುದು ನಿಂತ ನೀರಾಗಬಾರದು. ನಾವು ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿದರೂ ಕಲಿಯುವ ಪ್ರವೃತ್ತಿ ಮುಂದುವರಿಸಿಕೊಂಡು ಹೋಗಬೇಕು. ಮಕ್ಕಳ ಜ್ಞಾನ ವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ ಎಂದರು.

ಮುಗಳಿ ಸರ್ಕಾರಿ ಪ್ರೌಢಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖವಾಸ್ತ, ಪ್ರಾಥಮಿಕ ಶಾಲೆ ಅಧ್ಯಕ್ಷ ಮುದಿಯಪ್ಪ ಬಿಸಾಟಿ, ಯಲ್ಲಪ್ಪ ಕುರಿ, ಸಣ್ಣಹನಮಂತಪ್ಪ ತಳ್ಳಿಹಾಳ, ಶರಣಪ್ಪ ಜಿಗಳೂರ, ಶಿಕ್ಷಕರಾದ ಪಿ.ಎ. ಹುನಗುಂದ, ಎಸ್.ಜಿ. ಕಳ್ಳಿಮಠ, ಎಂ.ವೈ. ಬಿಸ್ತಿ, ಜೆ.ಎಂ. ಬೂದಿಹಾಳ, ಎಸ್.ಬಿ. ಶಿರಗುಂಪಿ, ಆರ್.ಟಿ. ಆರೇರ, ಇತರರು ಇದ್ದರು.