ಘಟಪ್ರಭಾ: ಹಿಂದು ದೇವಸ್ಥಾನ, ಮಠ-ಮಾನ್ಯಗಳು ಹಾಗೂ ಹಬ್ಬಗಳ ಬಗ್ಗೆ ನಿರಂತರ ಅಪಚಾರ ನಡೆಯುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ಗಣೇಶೋತ್ಸವ ಅಂಗವಾಗಿ ವೀರ ಸಾವರ್ಕರ್ ಯುವಕ ಸಂ ಹಾಗೂ ಶ್ರೀರಾಮ ಸೇನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ದಿಲ್ಲಿಯವರೆ ಬಂದು ನನ್ನನ್ನು ಬಿಜೆಪಿ ಪಕ್ಕೆ ಕರೆದುಕೊಂಡು ಹೋಗುತ್ತಾರೆ. 2028ರ ಚುನಾವಣೆಯಲ್ಲಿ ಪ ಭರ್ಜರಿ ಗೆಲುವು ಸಾಧಿಸುವ ಮೂಲಕ ನಾನೇ ಸಿಎಂ ಆಗುತ್ತೇನೆ. ದೇಶಕ್ಕೆ ನರೇಂದ್ರ ಮೋದಿಯಂತಹ ಒಳ್ಳೆಯ ಪ್ರಧಾನಮಂತ್ರಿ ಸಿಕ್ಕಿರುವುದರಿಂದಲೇ ನಾವೆಲ್ಲ ಚೆನ್ನಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದುಗಳಿಗೊಂದು, ಮುಸ್ಲಿಂರಿಗೊಂದು ಕಾನೂನು ಏಕೆ? ಎಂದು ಪ್ರಶ್ನಿಸಿದ ಅವರು, ಗಣೇಶ ಹಬ್ಬ ಆಚರಣೆಗೆ ಸರ್ಕಾರ ಕಟ್ಟಳೆ ವಿಧಿಸುತ್ತಿದೆ. ಧರ್ಮಸ್ಥಳದ ಹೆಸರು ಕೆಡಿಸುವ ದುರದ್ದೇಶದಿಂದಲೇ ಯಾರೋ ಮೂರ್ಖನ ಮಾತು ಕೇಳಿ ನೆಲ ಅಗೆಯಲು ಮುಂದಾಗಿದ್ದರು. ಗ್ಯಾರಂಟಿ ನೆಪದಲ್ಲಿ ಅಗತ್ಯ ವಸ್ತುಗಳ ಬೆಲೆ ಹಾಗೂ ತೆರಿಗೆ ಹೆಚ್ಚಿಸಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಂಪಯ್ಯಸ್ವಾಮಿ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಹೊಸಮಠದ ವಿರೂಪಾ ಸ್ವಾಮೀಜಿ ಆಶೀರ್ವಚನ ನೀಡಿದರು. ದರ್ಶನ ವಾಳಕೆ, ಶಿವರಾಜ ಅಂಬಾರಿ ಇತರರಿದ್ದರು. ಲಕ್ಷ$್ಮಣ ಯಡ್ರಾವಿ ನಿರೂಪಿಸಿದರು.