ಜಿಲ್ಲೆ

ಮೈಸೂರು ನಗರದಲ್ಲಿ ನಿರಂತರ ಸೋನೆ ಮಳೆ

ಅವಿನಾಶ್ ಜೈನಹಳ್ಳಿ

ಮೈಸೂರು: ನಗರದಲ್ಲಿ ಸೋಮವಾರವೂ ಜಿಟಿ ಜಿಟಿ ಸೋನೆ ಮಳೆ ಮುಂದುವರಿದಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇತ್ತು.

ಬೆಳಗ್ಗೆ 9.30ರ ವೇಳೆಯಲ್ಲಿ ಸ್ವಲ್ಪ ಸೋನೆಯೊಂದಿಗೆ ಆರಂಭವಾದ ಮಳೆ ನಂತರ ಜೋರಾಗಿಯೇ ಸುರಿಯಿತು. ಮಧ್ಯಾಹ್ನ ಇನ್ನಷ್ಟು ಜೋರಾಗಿ ವರುಣ ಕೃಪೆ ಮಾಡಿದ. ಪರಿಣಾಮ, ತಗ್ಗು ಪ್ರದೇಶಕ್ಕೆ ನೀರು ಹರಿಯಿತು.

ಕೊಂಚ ಕಾಲದ ಬಿಡುವಿನ ನಂತರ ಶುರುವಾದ ಜಿಟಿಜಿಟಿ ಮಳೆ ಆಗೊಮ್ಮೆ, ಈಗೊಮ್ಮೆ ಜೋರಾಗಿ ಸುರಿದು ಮೈಸೂರು ನಗರ ಮಲೆನಾಡಿನಂತೆ ಗೋಚರವಾಯಿತು.