ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ವೇದಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಜಿ.ಜಗದೀಶ್ ಉದ್ಘಾಟಿಸಿದರು. ಡಾ. ಎನ್.ಹೇಮಲತಾ, ನಾಗರಾಜ್ ಬಲೀಂದ್ರ ನಾಯ್ಕ, ಸುರೇಶ್, ಬಸವರಾಜ್, ಸಚಿನ್ ಇತರರಿದ್ದರು.  
ಜಿಲ್ಲೆ

ನಿರಂತರ ಶ್ರಮ, ಇಚ್ಛಾಶಕ್ತಿಯೇ ಸಾಧನೆಗೆ ಅಡಿಗಲ್ಲು

ಸೊರಬ: ಶಾಸಕರಾದ ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿರುವುದು ಹಾಗೂ ನನ್ನನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತನನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಜತೆಗೆ ಶೈಕ್ಷಣಿಕವಾಗಿ ಸೊರಬ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಹಕಾರಿ ಆಗಿದೆ ಎಂದು ಐಎಎಸ್ ಅಧಿಕಾರಿ ಜಿ.ಜಗದೀಶ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿವಿಧ ವೇದಿಕೆಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಿದ್ಧನಿದ್ದೇನೆ. ನಿವೃತ್ತಿಯಾದ ಉಪನ್ಯಾಸಕರಿಗೆ ಪಿಂಚಣಿ ದೊರೆಯದಿದ್ದಲ್ಲಿ ನನ್ನ ಗಮನಕ್ಕೆ ತಂದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವಿದ್ಯಾರ್ಥಿಗಳು ಓದಿನ ಜತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಉದ್ಯೋಗ ಪಡೆಯಲು ನಿರಂತರ ಪರಿಶ್ರಮ ಹಾಗೂ ತರಬೇತಿ ಪಡೆಯಬೇಕು. ಸಾಧನೆ ಮಾಡಲೇಬೇಕೆಂದರೆ ವಿದ್ಯಾರ್ಥಿಗಳು ವ್ಯತಿರಿಕ್ತ ಮೊಬೈಲ್ ಬಳಕೆಯಿಂದ ದೂರ ಉಳಿಯಬೇಕು. ಮನಸ್ಥಿತಿ ಸರಿಯಿಲ್ಲದ, ನಕರಾತ್ಮಕವಾಗಿ ಮಾತನಾಡುವ ಸ್ನೇಹಿತರನ್ನು ತ್ಯಾಗ ಮಾಡಬೇಕು. ಪಾಲಕರ ಶ್ರಮ, ಉಪನ್ಯಾಸಕರ ಪಾಠ ಅಷ್ಟೇ ವಿದ್ಯಾರ್ಥಿಗಳ ಸಾಧನೆಗೆ ಅಡಿಗಲ್ಲಾಗಲಾರದು. ಅದರಾಚೆಗೆ ನಿರಂತರ ಶ್ರಮ, ಇಚ್ಛಾಶಕ್ತಿ ಮುಖ್ಯ ಎಂದರು.
ವರ್ಗಾವಣೆಗೊಂಡ ಸಹಾಯಕ ಪ್ರಾಧ್ಯಾಪಕ ಎಂ.ಎಚ್.ರಾಜಪ್ಪ ಹಾಗೂ ಗ್ರಂಥಪಾಲಕ ಸಂತೋಷ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯೆ ಡಾ. ಎನ್.ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ್ ಬಲೀಂದ್ರ ನಾಯ್ಕ, ಸುರೇಶ್, ಬಸವರಾಜ್, ಸಚಿನ್, ವಿವಿಧ ವೇದಿಕೆಗಳ ಸಂಚಾಲಕರಾದ ಡಾ. ವಿಶ್ವನಾಥ್, ಶಂಕರ ನಾಯಕ್, ಯೋಗೀಶ್, ಡಾ. ಮೋಹನ್‌ಕುಮಾರ್, ವರ್ಷಾ ಕಾಸನಾಳೆ, ಮಧುರಾ ಯಾದವ್, ಉಪನ್ಯಾಸಕರಾದ ಟಿ. ರಾಘವೇಂದ್ರ, ರವಿ ಕಲ್ಲಂಬಿ, ನಾಗರಾಜ್, ರಾಜಶೇಖರ್ ಗೌಡ, ಆಶಾ ಗೌಡರ್, ವಸಂತ್, ಚಂದ್ರಪ್ಪ ಮತ್ತಿತರರಿದ್ದರು.
ಜಯಲಕ್ಷ್ಮೀ ಮತ್ತು ಕೋಮಲಾ ಪ್ರಾರ್ಥಿಸಿದರು. ಉಪನ್ಯಾಸಕರಾದ ಡಾ. ನೇತ್ರಾವತಿ ಸ್ವಾಗತಿಸಿದರು. ಎ.ವಿ.ಪವಿತ್ರಾ ನಿರೂಪಿಸಿದರು. ಪ್ರಶಾಂತ ಎಲ್.ಹೆಗಡೆ ವಂದಿಸಿದರು.