ಜಿಲ್ಲೆ

ಸತತ ಪ್ರಯತ್ನ ಗೆಲುವಿಗೆ ನಾಂದಿ

ಇಂದಿರಾ ಎನ್ ಕೆ

ಕಾರ್ಕಳ: ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳ ಉತ್ಸಾಹ, ವಿವಿಧ ಸ್ಪರ್ಧೆಗೆ ನಡೆಸುವ ತರಬೇತಿ ಅಭ್ಯಾಸಗಳೇ ನಿಜವಾದ ಗೆಲುವು. ಪ್ರಶಸ್ತಿಗಳು ಇಂದು ಗಳಿಸಿದ ಅಂಕಕ್ಕೆ ಸೀಮಿತವಾದರೆ, ಸ್ಪರ್ಧೆಯ ಹಿಂದಿನ ಪ್ರಯತ್ನ ಬದುಕಿನುದ್ದಕ್ಕೂ ಗೆಲುವು ತಂದುಕೊಡುತ್ತವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಉಪ ಕುಲಸಚಿವೆ ಪ್ರೊ.ಡಾ.ಸುಮಾ ಬಲ್ಲಾಳ್ ಹೇಳಿದರು.

ನಿಟ್ಟೆ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜು ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಎನ್-ಇಗ್ಮಾ 2025- ಯುಗಾರ್ಥವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್ ಎಂ. ವಂದಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಅಮನ್ ಎಸ್. ಪ್ರಸ್ತಾವನೆಗೈದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ಮಾಲಿನಿ ಜೆ.ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಚಂದ್ರಮೌಳಿ ಭಂಡಾರಿ ನಿರೂಪಿಸಿದರು. 20 ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂತರ್ ಕಾಲೇಜು ಸ್ಪರ್ಧೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಏಕಾಂಗಿತನದಲ್ಲಿ ಕಳೆದು ಹೋದ ವಿದ್ಯಾರ್ಥಿ ಸಮುದಾಯವನ್ನು ಮತ್ತೆ ವಾಸ್ತವ ಬದುಕಿಗೆ ಕರೆತರುವಂತೆ ಮಾಡುತ್ತದೆ. ಸ್ಪರ್ಧೆಗಳಲ್ಲಿ ಇರುವಷ್ಟು ಸಮಯ ವಿದ್ಯಾರ್ಥಿಗಳು ಪರಸ್ಪರ ಮಾತು, ಚರ್ಚೆ, ಹಾಡು, ಕುಣಿತ, ಆಟಗಳ ಮೂರ್ತ ಜಗತ್ತಿನಲ್ಲಿ ಸಂಚರಿಸುತ್ತಾರೆ. ಇದೇ ಒಂದು ಸಂಸ್ಥೆಯಾಗಿ ನಾವು ಈ ಸಮಾಜಕ್ಕೆ ಕೊಡುವ ಕೊಡುಗೆ. -ಡಾ.ವೀಣಾ ಕುಮಾರಿ ಬಿ.ಕೆ., ಪ್ರಾಂಶುಪಾಲರು https://www.vijayavani.net/achievers-honored-at-lavanya-anniversary https://www.vijayavani.net/protests-against-the-governments-stance