ಕಲಘಟಗಿ ಪಟ್ಟಣದಲ್ಲಿ ಜರುಗಿದ ಗುರು ಸೋಮಲಿಂಗೇಶ್ವರ ಅಜ್ಜನವರ ಪುಣ್ಯಾರಾಧನೆ, ಸಾಧಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಡಾ.ರಾಜು ತಾಳಿಕೋಟಿ ಉದ್ಘಾಟಿಸಿದರು. ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಸೋಮೇಶ್ವರ ಸ್ವಾಮೀಜಿ, ಎಂ.ಆರ್. ತೋಟಗಂಟಿ, ಸೋಮಲಿಂಗ ಒಡೆಯರ, ಡಾ. ಫಕೀರೇಶ ನಿಗದಿ ಇತರರಿದ್ದರು. 
ಜಿಲ್ಲೆ

ಸಾಧನೆಗೆ ನಿರಂತರ ಪ್ರಯತ್ನ ಅಗತ್ಯ

ಸೋಮನಾಥ ರೆಡ್ಡಿ

ಕಲಘಟಗಿ: ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರಬೇಕು ಎಂದು ಧಾರವಾಡ ರಂಗಾಯನ ನಿರ್ದೇಶಕ ಡಾ.ರಾಜು ತಾಳಿಕೋಟಿ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಸೋಮಲಿಂಗೇಶ್ವರ ನಗರದಲ್ಲಿ ಆಯೋಜಿಸಿದ್ದ ಗುರು ಸೋಮಲಿಂಗೇಶ್ವರ ಅಜ್ಜನವರ ಪುಣ್ಯಾರಾಧನೆ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 101 ಸಾಧಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಪ್ರಯತ್ನ ಬಹಳ ಮುಖ್ಯ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯ ಅನನ್ಯವಾದುದು. ಸಾಧಕರನ್ನು ಸಮಾಜಕ್ಕೆ ಪರಿಚಯ ಮಾಡುವ ಮೂಲಕ ನಾವು ಅವರಿಗೆ ಪ್ರೇರಣೆ ನೀಡಬೇಕಿದೆ ಎಂದರು.

ಕಲಘಟಗಿ ಹನ್ನೆರಡುಮಠದ ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯರು ಹಾಗೂ ವಿಜಯಪುರ ಜಿಲ್ಲೆಯ ಮಖಣಾಪುರ ಶ್ರೀ ಸೋಮಲಿಂಗೇಶ್ವರ ಗುರುಪೀಠದ ಶ್ರೀ ಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರು ಸೋಮಲಿಂಗಲೇಶ್ವರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಪರಮಾನಂದ ಒಡೆಯರ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ನವದೆಹಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರು ಮಾತನಾಡಿದರು.

ಹಿರಿಯ ಜಾನಪದ ಕಲಾವಿದ ಎಂ.ಆರ್. ತೋಟಗಂಟಿ, ಸೋಮಲಿಂಗ ಒಡೆಯರ ಹಾಗೂ ಡಾ. ಫಕೀರೇಶ ನಿಗದಿ, ಎಂ.ಎಸ್. ಗುರುಮಠ, ಗೀತಾ ಮರಲಿಂಗಣ್ಣವರ, ಮಂಜುನಾಥ ಮುರಳ್ಳಿ, ಯಲ್ಲಪ್ಪ ದಾಸನಕೊಪ್ಪ, ಶಂಕರ ರಡ್ಡಿ, ಮಂಜುನಾಥ ಶಿವಕ್ಕನವರ, ರಮೇಶ ಸೋಲಾರಗೊಪ್ಪ, ಕಲ್ಲಪ್ಪ ಮಿರ್ಜಿ, ಬಸವರಾಜ ತಿಪ್ಪಣ್ಣವರ, ಎಸ್.ಐ. ಧನಿಗೊಂಡ, ಅನಿಲ ಲೋಕರೆ, ಶಿವಾನಂದ ಹುರಕಡ್ಲಿ, ರವಿ ತೋಟಗಂಟಿ, ಪ್ರೇಮಾ ಗುಳೇದಗುಡ್ಡ ಇತರರಿದ್ದರು.