ಹುಬ್ಬಳ್ಳಿ: ಇಲ್ಲಿಯ ಭವಾನಿನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಜಯತೀರ್ಥರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ ಅಂಗವಾಗಿ ತಿರುಪತಿಯ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮಂತ್ರಾಲಯ ಜಂಟಿ ಸಹಯೋಗದಲ್ಲಿ ನಿರಂತರ ಭಜನೆ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯ ಭಗವದ್ಗೀತಾ ಭಜನಾ ಮಹಿಳಾ ಮಂಡಳಿ ಅಧ್ಯಕ್ಷೆ ಸುರೇಖಾ ಕುಲಕರ್ಣಿ, ಎನ್. ಲಕ್ಷ್ಮಿ, ಜ್ಯೋತಿ ಕುಲಕರ್ಣಿ, ಪದ್ಮಾ ಕುಂದರಗಿ, ಜಯಲಕ್ಷ್ಮಿ ಮಳಗಿ, ಉಷಾ ಕಟ್ಟಿ, ಶಶಿಕಲಾ ಜಮಖಂಡಿ, ನಿರ್ಮಲಾ ಕುಲಕರ್ಣಿ, ಜಯಪ್ರದಾ ಪದಕಿ, ಪಲ್ಲವಿ ಜೋಶಿ, ಶಾಮಲಾ ಬೆಂಗೇರಿ, ಗೀತಾ, ಮುಂತಾದವರು ಭಾಗವಹಿಸಿದ್ದರು.
ಶ್ರೀ ಮಠದ ಅರ್ಚಕರಾದ ಗುರು ರಾಜಾಚಾರ್ಯ ಸಾಮಗ, ಮದ್ವೇಶ ಆಚಾರ್ಯ, ಪವನ ಆಚಾರ್ಯ, ಟಿಟಿಡಿ ಸಂಚಾಲಕ ಗೋಪಾಲ ಕುಲಕರ್ಣಿ ನೇತೃತ್ವ ವಹಿಸಿದ್ದರು.