ಜಿಲ್ಲೆ

ಮುಂದುವರಿದ ಮುಷ್ಕರ

ಜಗದೀಶ ಹೊಂಬಳಿ

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಗ್ರಾಮ ಆಡಳಿತಗಳ ಕೇಂದ್ರ ಸಂಘದ ಆಶ್ರಯದಲ್ಲಿ ಸೌಕರ್ಯ ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಮುಂದುವರೆಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ಆರಂಭಿಸಿದ ಅನಿರ್ದಿಷ್ಟಾವಧಿ ಎರಡನೇಯ ಹಂತದ ಮೌನ ಮುಷ್ಕರ ಐದನೇ ದಿನವಾದ ಶುಕ್ರವಾರ ಕೂಡಾ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಮುಂದುವರೆದಿದೆ.

ಗ್ರಾಮಸ್ಥರು ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು ಕೆಲಸ ಮಾಡಿ ಕೊಡುವಂತೆ ವಿನಂತಿಸಿದರೂ ಕೂಡಾ ಕೆಲಸ ಮಾಡಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ನಾಗೇಂದ್ರ ಪಾಟೀಲ್‌ ತಿಳಿಸಿದರು.

ಗ್ರಾಮ ಆಡಳಿತ ಮೌನ ಮುಷ್ಕರದಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಗ್ರಾಮಸ್ಥರು ಗ್ರಾಮ ಕರಣಿಕರ ಸೇವೆ ಸಿಗದೆ ತೊಂದರೆಗೊಳಗಾಗಿದ್ದಾರೆ. ವಿದ್ಯಾರ್ಥಿಗಳಿಗೆ, ರೈತರಿಗೆ, ಬ್ಯಾಂಕಿಗೆ ಬೇಕಾದ ಕಾಗದ ಪತ್ರ, ಪಹಣಿ ಪತ್ರ, ಆದಾಯ ಪ್ರಮಾಣ ಪತ್ರ ಸಹಿತ ಅಗತ್ಯ ದಾಖಲೆಗಳಿಗೆ ಗ್ರಾಮ ಕರಣಿಕರ ಸಹಿ ಪಡೆದು ಕೊಳ್ಳಲು ಜನರು ಪರದಾಡುತ್ತಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕೂಡಾ ಕೆಲವು ಗ್ರಾಮಗಳ ಗ್ರಾಮಸ್ಥರು ಆಗಮಿಸಿದ್ದರು. ಆದರೆ ಮುಷ್ಕರ ನಿರತ ಸಿಬ್ಬಂದಿ ಗ್ರಾಮಸ್ಥರ ಕೆಲಸ ಮಾಡಿಕೂಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಕರಣಿಕರ ಸಹಿ ಪಡೆಯಲು ಬಂದ ಗ್ರಾಮಸ್ಥರು ಬಂದ ದಾರಿಗೆ ಸುಂಕವಿಲ್ಲ ಎಂಬತೆ ಬರಿಗೈಲಿ ವಾಪಾಸ್‌ ಹೋದರು.